ಕಾಮಿಡಿ ಕಿಲಾಡಿಗಳು, ಕೆಜಿಎಫ್ ನಟ ಗೋವಿಂದೇ ಗೌಡನಿಗೆ ಕಂಕಣ ಭಾಗ್ಯ, ಯುವತಿ ಯಾರು ಗೊತ್ತ?

ಪ್ರಸ್ತುತ ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ಗೋವಿಂದೆ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.
ಗೋವಿಂದೆ ಗೌಡ
ಗೋವಿಂದೆ ಗೌಡ
ಪ್ರಸ್ತುತ ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ಗೋವಿಂದೆ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.
ಹೌದು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೊದಲ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ಗೋವಿಂದೆ ಗೌಡ ಈ ಶೋನಿಂದ ಖ್ಯಾತರಾಗಿದ್ದು ಇದೀಗ ಮದುವೆಯ ಸಂತಸದಲ್ಲಿದ್ದಾರೆ. ಹೌದು ಇದೇ ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದ ದಿವ್ಯರನ್ನು ಗೋವಿಂದೆ ಗೌಡ ಮದುವೆಯಾಗುತ್ತಿದ್ದಾರೆ. 
ತಮ್ಮ ಮದುವೆ ವಿಷಯವನ್ನು ಹಂಚಿಕೊಂಡಿರುವ ಗೋವಿಂದೆ ಗೌಡ ಅವರು ಜನವರಿ 27ಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದು ಮಾರ್ಚ್ 14ರಂದು ಶೃಂಗೇರಿಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. 
ಕಾಮಿಡಿ ಕಿಲಾಡಿಗಳು ಶೋ ನಂತರ ಗೋವಿಂದೆ ಗೌಡ ಹಾಗೂ ದಿವ್ಯ ಇಬ್ಬರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ದಿವ್ಯ ಸದ್ಯ ಪುಣ್ಯಾತ್ ಗಿತ್ತೀಯರು ಚಿತ್ರದಲ್ಲಿ ನಟಿಸಿದ್ದಾರೆ. ಗೋವಿಂದೆ ಗೌಡ ಅವರು ಕೆಜಿಎಫ್ ಬಳಿಕ ಭರಾಟೆ ಸೇರಿದಂತೆ ಸಾಕಷ್ಟು ಚಿತ್ರಗಳ ಅವಕಾಶ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com