ಅರ್ಜುನ ನಂತರ ಮತ್ತೆ ಒಂದಾದ ಪಿ.ಸಿ ಶೇಖರ್, ಪ್ರಜ್ವಲ್ ದೇವರಾಜ್

ನಟ ಪ್ರಜ್ವಲ್ ದೇವರಾಜ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ಸ್ ಪೆಕ್ಟರ್ ವಿಕ್ರಮ್, ಅರ್ಜುನ್ ಗೌಡ, ಜಂಟಲ್ ಮ್ಯಾನ್, ಅರ್ಜುನ್ ಗೌಡ ...
ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್
ಬೆಂಗಳೂರು: ನಟ ಪ್ರಜ್ವಲ್ ದೇವರಾಜ್  ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ಸ್ ಪೆಕ್ಟರ್ ವಿಕ್ರಮ್, ಅರ್ಜುನ್ ಗೌಡ, ಜಂಟಲ್ ಮ್ಯಾನ್, ಅರ್ಜುನ್ ಗೌಡ ಮತ್ತು ರುಧಿರ ಸಿನಿಮಾ ಶೂಟಿಂಗ್ ನಲ್ಲಿ ಪ್ರಜ್ವಲ್ ಬ್ಯುಸಿಯಾಗಿದ್ದಾರೆ.
ಅರ್ಜುನ ಸಿನಿಮಾ ನಂತರ ಪ್ರಜ್ವಲ್ ಪ್ರೇಮ ಕಥಾ ವಸ್ತುವುಳ್ಳ ,ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ, ರೋಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ನಟಿಸಲು ಪ್ರಜ್ವಲ್ ಸಮ್ಮತಿಸಿದ್ದಾರೆ.
ನನ್ನ ಕೆರಿಯರ್ ನಲ್ಲಿ ಅರ್ಜುನ ಉತ್ತಮವಾದದ್ದು, ನಾನು ಆ ಸಿನಿಮಾವನ್ನು ತುಂಬಾ ಪ್ರಿತೀಸುತ್ತೇನೆ, ಸ್ಲಂ ನಲ್ಲಿ ಬೆಳೆದ ಹುಡುಗನೊಬ್ಬನ ಪ್ರೇಮ ಕಥೆ ಇದಾಗಿದೆ. ಸದ್ಯ ಮೂರು ಸಿನಿಮಾ ಶೂಟಿಂಗ್ ನಲ್ಲಿ  ಬ್ಯುಸಿಯಾಗಿದ್ದಾರೆ, ಶಂಕರ್ ನಿರ್ದೇಶನದ ಅರ್ಜುನ್ ಗೌಡ ಸಿನಿಮಾದಲ್ಲಿ ಪ್ರಜ್ವಲ್ ಬ್ಯುಸಿಯಾಗಿದ್ದಾರೆ. 
ಜೊತೆಗೆ ಜಡೇಶ್ ಕುಮಾರ್ ಅವರ ಜಂಟಲ್ ಮ್ಯಾನ್ ಹಾಗೂ ಅದಾದ ನಂತರ ಶ್ರೀನರಸಿಂಹ ನಿರ್ದೇಶನದ ಇನ್ಸ್ ಪೆಕ್ಟರ್ ವಿಕ್ರಮ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ, 2019 ರಲ್ಲಿ  ಪ್ರಜ್ವಲ್ ನಟಿಸಿರುವ ಸುಮಾರು 3 ಸಿನಿಮಾಗಳು ರಿಲೀಸ್ ಆಗಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com