ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿರುವ ಕೆಜಿಎಫ್, ಪೆಟ್ಟಾ, ವಿಶ್ವಸಂ ಚಿತ್ರಗಳ ಕಾಂಪಿಟೇಷನ್, ಕಲೆಕ್ಷನ್!

ರಾಕಿಂಗ್ ಸ್ಟಾರ್ ಯಶ್, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಜಿತ್ ಅಭಿನಯದ ಕೆಜಿಎಫ್, ಪೆಟ್ಟಾ ಹಾಗೂ ವಿಶ್ವಸಂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದ್ದು, ದೇಶ , ವಿದೇಶಗಳಲ್ಲಿ ಕೋಟಿ ಕೋಟಿ ಹಣ ಬಾಚುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರಾಕಿಂಗ್ ಸ್ಟಾರ್ ಯಶ್,  ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಜಿತ್ ಅಭಿನಯದ ಕೆಜಿಎಫ್, ಪೆಟ್ಟಾ ಹಾಗೂ  ವಿಶ್ವಸಂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದ್ದು, ದೇಶ , ವಿದೇಶಗಳಲ್ಲಿ  ಕೋಟಿ ಕೋಟಿ ಹಣ ಬಾಚುತ್ತಿವೆ.
ಚಿತ್ರ ಪ್ರೇಮಿಗಳನ್ನು  ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಚಿತ್ರಗಳು ಪರಸ್ಪರ ಪೈಪೋಟಿಗೆ ಬಿದ್ದಂತೆ ಹಣ ದೋಚುತ್ತಿವೆ. ಕೆಜಿಎಫ್ ಇದೇ ಮೊದಲ ಬಾರಿಗೆ ಪಾಕಿಸ್ತಾನ, ಅಮೆರಿಕಾ ಸೇರಿದಂತೆ ಹೊರದೇಶಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು,  200 ಕೋಟಿಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡಿದೆ.
ರಜನಿಕಾಂತ್ ಅಭಿನಯದ  ಪೆಟ್ಟಾ ತಮಿಳು, ತೆಲುಗು ಹಾಗೂ ಹಿಂದಿ ಆವೃತ್ತಿಯಲ್ಲಿ ಬಿಡುಗಡೆಯಾದ ಎರಡು ದಿನಗಳಲ್ಲಿಯೇ 35.50 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಿಶ್ವಸಂ ತಮಿಳು ವರ್ಸನ್  ನಲ್ಲಿ 33.50 ಕೋಟಿ ರೂ. ಗಳಿಸಿದೆ.
ಕೆಜಿಎಫ್ ಬಿಡುಗಡೆಯಾಗಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದು, ವಿಶ್ವದಾದ್ಯಂತ  ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ  ಬಿಡುಗಡೆಯಾದ ಮೊದಲ ದಿನವೇ 26 ಕೋಟಿ ರೂ. ಗಳಿಸಿದ ಅಜಿತ್ ಅಭಿನಯದ ವಿಶ್ವಸಂ ವರ್ಲ್ಡ್ ವೈಡ್ ಕಲೆಕ್ಷನ್  43 ಕೋಟಿಯಾಗಿದೆ. ರಜನಿಕಾಂತ್ ಅಭಿಯನದ ಪೇಟಾ ಬಿಡುಗಡೆಯಾದ ಮೊದಲ ದಿನದ ಕಲೆಕ್ಷನ್ 23 ಕೋಟಿಯಾಗಿದ್ದು, ವರ್ಲ್ಡ್ ವೈಡ್ ಕಲೆಕ್ಷನ್  48 ಕೋಟಿ ರೂ.ಆಗಿದೆ.
ಕೆಜಿಎಫ್ ಹಿಂದಿ ಆವೃತ್ತಿ ಬಿಡುಗಡೆಯಾದ ಮೊದಲ ವಾರವೇ 21. 45 ಕೋಟಿ ರೂ. ಗಳಿಸಿತ್ತು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 40 ಕೋಟಿಗೂ ಅಧಿಕ ಹಣ ಬಾಚಿದೆ. ಬಾಹುಬಲಿ 2, 2.0  ಮತ್ತು ಬಾಹುಬಲಿ ಚಿತ್ರಗಳ ನಂತರ ಅತಿ ಹೆಚ್ಚು ಹಣ ಮಾಡಿರುವ ಡಬ್ಬಿಂಗ್ ಚಿತ್ರ ಕೆಜಿಎಫ್ ಆಗಿದೆ. ಒಟ್ಟಾರೇಯಾಗಿ ಕೆಜಿಎಫ್  200 ಕೋಟಿ ರೂ. ಮಾಡಿದ ಮೊದಲ ಕನ್ನಡ  ಚಿತ್ರವಾಗಿದೆ ಎಂದು  ಚಿತ್ರೋದ್ಯಮ ವಿಶ್ಲೇಷಕ  ತರಣ್ ಆದರ್ಶ್  ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com