ಗಾಳಿಪಟ-2 ಸಿನಿಮಾ ಶೂಟಿಂಗ್ ಶೀಘ್ರವೇ ಆರಂಭ

11 ವರ್ಷಗಳ ಹಿಂದೆ ಗಾಳಿಪಟ ಸಿನಿಮಾದ ಮಿಂಚಾಗಿ ನೀನು ಬರಲು ಹಾಡು ಎಲ್ಲರ ಹೃದಯ ಗೆದ್ದಿತ್ತು, ಈಗ ಮತ್ತದೇ ಯೋಗರಾಜ ಭಟ್ಟರು, ಗಾಳಿಪಟ-2 ಸಿನಿಮಾ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ.

Published: 19th January 2019 12:00 PM  |   Last Updated: 19th January 2019 11:55 AM   |  A+A-


Sharmiela Mandre and Sonal Monteiro

ಶರ್ಮಿಳಾ ಮಾಂಡ್ರೆ ಮತ್ತು ಸೋನಾಲ್ ಮಾಂಟೆರಿಯೋ

Posted By : SD
Source : The New Indian Express
11 ವರ್ಷಗಳ ಹಿಂದೆ ಗಾಳಿಪಟ ಸಿನಿಮಾದ ಮಿಂಚಾಗಿ ನೀನು ಬರಲು ಹಾಡು ಎಲ್ಲರ ಹೃದಯ ಗೆದ್ದಿತ್ತು, ಈಗ ಮತ್ತದೇ ಯೋಗರಾಜ ಭಟ್ಟರು, ಗಾಳಿಪಟ-2 ಸಿನಿಮಾ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಮಹೇಶ್ ದಾನಣ್ಣನವರ ನಿರ್ಮಾಣದ ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಕೂಡ ಅಭಿನಯಿಸಲಿದ್ದಾರೆ.

ಶರಣ್, ಪವನ್ ಕುಮಾರ್ ಮತ್ತು ರಿಷಿ ನಾಯಕರಾಗಿರುವ ಈ ಸಿನಿಮಾದಲ್ಲಿ ಅನಂತ್ ನಾಗ್ ಪ್ರಧಾನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ,

ಕರ್ನಾಟಕ ಮತ್ತು ವಿದೇಶಗಳಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ, ಬೆಂಗಳೂರು, ಮಂಡ್ಯ ಮತ್ತು ಧಾರವಾಡ ಮೂಲದ ಮೂರು ವ್ಯಕ್ತಿಗಳ ಕಥಾವಸ್ತುವಾಗಿದೆ, 

ರಂಗಾಯಣ ರಘು ಸಿನಿಮಾದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ, ಸಿನಿಮಾದಲ್ಲಿ ಐದು ಹಿರೋಯಿನ್ ಗಳಿದ್ದು, ಶರ್ಮಿಳಾ ಮಾಂಡ್ರೆ ಸೋನಾಲ್ ಮಾಂಟೆರಿಯೋ ಫೈನಲ್ ಆಗಿದ್ದಾರೆ, ಇನ್ನೂ ಮೂವರು ಹಿರೋಯಿನ್ ಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ, ಭಟ್ರ ಸಿನಿಮಾಗೆ ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp