ಸ್ಟಾರ್ ನಟನಾದರೂ, ಪುನೀತ್ ಅತ್ಯಂತ ವಿನೀತ: ಅನುಪಮಾ ಪರಮೇಶ್ವರನ್

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮ ಪರಮೇಶ್ವರನ್ ನಟಸಾರ್ವಭೌಮ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.

Published: 28th January 2019 12:00 PM  |   Last Updated: 28th January 2019 03:49 AM   |  A+A-


Anupama Parameswaran With Puneeth Rajkumar

ಪುನೀತ್ ರಾಜ್ ಕುಮಾರ್ ಜೊತೆಗೆ ಅನುಪಮ ಪರಮೇಶ್ವರನ್

Posted By : ABN ABN
Source : The New Indian Express
ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಈಗಾಗಲೇ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮ ಪರಮೇಶ್ವರನ್  'ನಟಸಾರ್ವಭೌಮ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ.

ಪವನ್ ಒಡೆಯರ್ ನಿರ್ದೇಶನದಲ್ಲಿ ರಾಕ್ ಲೈನ್ ಪ್ರೋಢಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕಿಯಾಗಿ ಅನುಪಮ ಪರಮೇಶ್ವರನ್ ನಟಿಸಿದ್ದಾರೆ.

ನಟ ಸಾರ್ವಭೌಮ ಚಿತ್ರ ಹಾಗೂ ಚಿತ್ರೀಕರಣದ ಅನುಭವವನ್ನು ದಿ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಹಂಚಿಕೊಂಡಿರುವ ಅನುಪಮ ಪರಮೇಶ್ವರನ್, ಪಾತ್ರ ಚಿಕ್ಕದಾದರೂ ತುಂಬಾ ಪರಿಣಾಮ ಬೀರಿದೆ. ಭವಿಷ್ಯ ರೂಪಿಸುವಲ್ಲಿಯೂ ನೆರವಾಗಿದೆ ಎನ್ನುತ್ತಾರೆ.

ಎಲ್ಲಾ ಚಿತ್ರರಂಗದಲ್ಲೂ ಉತ್ತಮವಾಗಿ ಓಪನಿಂಗ್ ಪಡೆದುಕೊಂಡಿದ್ದು, ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದೇನೆ. ಉತ್ತಮ ಕಥೆ ಹಾಗೂ ಸಹ ನಟರೊಂದಿಗೆ ಕೆಲಸ ಮಾಡಿದ್ದೇನೆ.ನಟ ಸಾರ್ವಭೌಮ ಚಿತ್ರದಲ್ಲೂ ಇದೇ ರೀತಿ ಕೆಲಸ ಮಾಡಿರುವುದಾಗಿ ಹೇಳಿದರು.

ಕನ್ನಡದಲ್ಲಿ ಪವನ್ ಒಡೆಯರ್ ಅವರ ಕಥೆ ಅನುಪಮ ಪರಮೇಶ್ವರ್ ಅವರಿಗೆ ಹಿಡಿಸಿದೆ. ಕಥೆ ಕೇಳಿದಾಗ ತುಂಬಾ ಇಷ್ಟವಾಯಿತು. ಪಾತ್ರದಾರಿಯಾಗಿಯೂ ಸಂತೋಷದಿಂದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದೆ.ವೀಕ್ಷಕರೂ ಕೂಡಾ ಇದೇ ಅನುಭವ ಹೊಂದಲಿದ್ದಾರೆ ಎಂಬ ಭರವಸೆ ಇಟ್ಟುಕೊಂಡಿರುವುದಾಗಿ ಅವರು ಹೇಳುತ್ತಾರೆ.

ಮೊದಲ ಬಾರಿಗೆ ತೆಲುಗು ಚಿತ್ರದಲ್ಲಿ ಅಭಿನಯಿಸಿದ್ದಾಗಿ ಸಂಪೂರ್ಣವಾಗಿ ಉದ್ಯಮ ಅಪರಿಚಿತವಾಗಿತ್ತು. ಆದಾಗ್ಯೂ, ಎರಡು ವರ್ಷ ಕಳೆದ ನಂತರ ಅಲ್ಲಿ ಅನೇಕ ಜನ ಇದ್ದಾರೆ ಎಂಬುದನ್ನು ಅರಿತಿದ್ದೇನೆ. ಸ್ಯಾಂಡಲ್ ವುಡ್ ನಲ್ಲಿಯೂ ಅದೇ ರೀತಿ ಇದೆ ಎನ್ನುವ ಅನುಪಮ ಶೀಘ್ರದಲ್ಲಿಯೇ ಕನ್ನಡದಲ್ಲಿಯೂ ಚಿರಪರಿಚಿತ ನಟಿಯಾಗುವುದಾಗಿ ಭರವಸೆ ಇಟ್ಟುಕೊಂಡಿದ್ದಾರೆ.

ನಟಸೌರ್ವಭೌಮ ಚಿತ್ರದಲ್ಲಿ ವಕೀಲೆಯಾಗಿ ಕಾಣಿಸಿಕೊಂಡಿರುವ ಅನುಪಮ ,ಪಾತ್ರ ಕುರಿತು ಹೆಚ್ಚಿನದಾಗಿ ಏನನ್ನೂ ಹೇಳಲಿಲ್ಲ. ಫೆಬ್ರವರಿ 7 ರಂದು ಚಿತ್ರ ಬಿಡುಗಡೆ ನಂತರ ಎಲ್ಲವೂ ಗೊತ್ತಾಗಲಿದೆ ಎಂದರು.

15 ದಿನಗಳ ಕಾಲ  ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ನಾನೇ  ಡಬ್ ಮಾಡಬಹುದಾದ ಎಂದು ನಿರ್ದೇಶಕರನ್ನು ಕೇಳಲಿಲ್ಲ. ಆದರೆ, ಮುಂದಿನ ಬಾರಿ ಕನ್ನಡ ಚಿತ್ರದಲ್ಲಿ ಅವಕಾಶ ದೊರೆತರೆ ತಾವೇ ಪರಿಪೂರ್ಣವಾಗಿ ಧ್ವನಿ ಡಬ್ ಮಾಡುವುದಾಗಿ ಹೇಳಿದರು.

ಬೆಂಗಳೂರು ಹಾಗೂ ಕೊಲ್ಕತ್ತಾದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಪುನೀತ್ ರಾಜ್ ಕುಮಾರ್ ಅವರ ಸರಳತೆ ಆಕರ್ಷಿಸಿದೆ.ಅವರ ಸರಳತೆಯ ವರ್ತನೆಯಿಂದ ಪ್ರೇರಿತಗೊಂಡಿರುವುದಾಗಿ ಹೇಳುವ ಅನುಪಮ, ಅವರೊಬ್ಬ ದೊಡ್ಡ ಸ್ಟಾರ್ ಆಗಿದ್ದರೂ  ಅತ್ಯಂತ ವಿನೀತ. ಎಲ್ಲರೊಂದಿಗೂ ಬೆರೆಯುತ್ತಾರೆ ಎಂದು ಅನುಪಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp