ಭಟ್ಟರ 'ಪಂಚತಂತ್ರ'ದಲ್ಲಿ ರಘು ದೀಕ್ಷಿತ್ ಗಾನಾ ಬಜಾನಾ!

ಖ್ಯಾತ ನಿರ್ದೇಶಕ ಯೊಗರಾಜ ಭಟ್ ತಮ್ಮ ಮುಂದಿನ ಚಿತ್ರ "ಪ<ಚತಂತ್ರ" ಕ್ಕಾಗಿ ವಿ. ಹರಿಕೃಷ್ಣ ಅವರನ್ನು ಸಂಗೀತ ನಿರ್ದೇಶಕರನ್ನಾಗಿಸಿಕೊಂಡಿರುವುದು ನಿಮಗೆ ಗೊತ್ತಿದೆ. ಆದರೆ ಈಗ ಬಂದ ಸುದ್ದಿಯಂತ....

Published: 28th January 2019 12:00 PM  |   Last Updated: 28th January 2019 02:46 AM   |  A+A-


Raghu Dixit

ರಘು ದೀಕ್ಷಿತ್

Posted By : RHN RHN
Source : The New Indian Express
ಬೆಂಗಳೂರು: ಖ್ಯಾತ ನಿರ್ದೇಶಕ ಯೊಗರಾಜ ಭಟ್ ತಮ್ಮ ಮುಂದಿನ ಚಿತ್ರ "ಪ<ಚತಂತ್ರ" ಕ್ಕಾಗಿ ವಿ. ಹರಿಕೃಷ್ಣ ಅವರನ್ನು ಸಂಗೀತ ನಿರ್ದೇಶಕರನ್ನಾಗಿಸಿಕೊಂಡಿರುವುದು ನಿಮಗೆ ಗೊತ್ತಿದೆ. ಆದರೆ ಈಗ ಬಂದ ಸುದ್ದಿಯಂತೆ ಖ್ಯಾತ ಗಾಯಕ, ಸಂಗೀತಗಾರರಾಗಿರುವ ರಘು ದೀಕ್ಷಿತ್ ಈ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಲಿದ್ದಾರೆ.

ಚಿತ್ರದ ಆಡಿಯೋ ಲಾಂಚ್ ಮುಂದಿನ ವಾರ ನಡೆಯಲಿದೆ.ವಿಹಾನ್ ಹಾಗೂ ಸೋನಾಲ್ ಮೊಂಟಾರಿಯೋ ನಾಯಕ, ನಾಯಕಿಯರಾಗಿರುವ "ಪಂಚತಂತ್ರ" ದಲ್ಲಿ ರಘು ಹಾಡು ಮೂಡಿಬರುವುದು ಖಚಿತ ಎನ್ನಲಾಗಿದ್ದು ಯಾವ ನಿರ್ದಿಷ್ಟ ಟ್ರ್ಯಾಕ್ ರಘು ದನಿಯಲ್ಲಿ ಬರತ್ತೆ ಎನ್ನುವುದನ್ನು ಇನ್ನಷ್ಟೇ ಕಾದು ನೊಡಬೇಕಿದೆ. ಚಿತ್ರತಂಡ ಇದೀಗ ಸೆನ್ಸಾರ್ ಮಂಡಳಿಯ ಅನುಮತಿಗಾಗಿ ಕಾಯುತ್ತಿದ್ದು ಒಮ್ಮೆ ಸೆನ್ಸಾರ್ ಒಕೆ ಆದ ಬಳಿಕ ಚಿತ್ರ ಬಿಡುಗಡೆ ಕುರಿತು ಅಧಿಕೃತ ಘೋಷಣೆ ಮಾಡಲಿದೆ.

ಹರಿಪ್ರಸಾದ್ ಜಯಣ್ಣ ಮತ್ತು ಹೇಮಂತ್ ಪರಡ್ಕ  ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಫೆಬ್ರವರಿಗೆ ತೆರೆಗೆ ಬರುವ ಎಲ್ಲಾ ನಿರೀಕ್ಷೆ ಇದೆ.ಇನ್ನು ತೆಲುಗು, ಹಿಂದಿಯಲ್ಲಿಯೂ ಈ ಚಿತ್ರ ತೆರೆಕಾಣುತ್ತಿದ್ದು ಅಲ್ಲಿಯೂ ಸಹ ಯೋಗರಾಜ್ ಭಟ್ ಅಲ್ಲಿನ ಚಿತ್ರಗಳಲ್ಲಿ ಸಹ ಕೆಲಸ ಮಾಡುತ್ತಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp