ದೀರ್ಘ ವಿರಾಮದ ನಂತರ ಯುವರತ್ನ ಮೂಲಕ ಮತ್ತೆ ನಟನೆಯತ್ತ ಪ್ರಕಾಶ್ ರಾಜ್

ಸಂತೋಷ್ ಆನಂದ್ ರಾಮು ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿಯನದ ಬಹುನಿರೀಕ್ಷಿತ 'ಯುವರತ್ನ' ಚಿತ್ರದ ಶೂಟಿಂಗ್ ರಾಜ್ಯದ ವಿವಿಧೆಡೆ ಬರದಿಂದ ಸಾಗಿದೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಕೂಡಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Published: 01st July 2019 12:00 PM  |   Last Updated: 01st July 2019 12:51 PM   |  A+A-


Collection photo

ಸಂಗ್ರಹ ಚಿತ್ರ

Posted By : ABN ABN
Source : The New Indian Express
ಬೆಂಗಳೂರು: ಸಂತೋಷ್  ಆನಂದ್ ರಾಮು ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿಯನದ  ಬಹುನಿರೀಕ್ಷಿತ 'ಯುವರತ್ನ' ಚಿತ್ರದ ಶೂಟಿಂಗ್ ರಾಜ್ಯದ  ವಿವಿಧೆಡೆ  ಬರದಿಂದ ಸಾಗಿದೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಕೂಡಾ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 ಬಾಲಿವುಡ್ ಹಾಗೂ ದಕ್ಷಿಣ ಭಾರತದ ಜನಪ್ರಿಯ ನಟನಾಗಿರುವ ಪ್ರಕಾಶ್ ರಾಜ್, ರಾಜಕೀಯದಲ್ಲಿ ಕೆಲಕಾಲ ಬ್ಯೂಸಿಯಾಗಿದ್ದರು. ಧೀರ್ಘ ವಿರಾಮದ ನಂತರ ಇದೀಗ ಮತ್ತೆ ಯುವರತ್ನ ಚಿತ್ರದ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಜೊತೆಯಲ್ಲಿ ಅಭಿನಯಿಸುತ್ತಿದ್ದಾರೆ.

ಕಾಲೇಜ್ ಪ್ರಿನ್ಸಿಪಾಲ್ ಅಥವಾ ಲೆಕ್ಟರರ್ ಪಾತ್ರದಲ್ಲಿ ಪ್ರಕಾಶ್ ರಾಜ್ ನಟಿಸಲಿದ್ದಾರೆ ಎಂಬ ವದಂತಿಗಳಿವೆ. ಈ ಬಗ್ಗೆ ಸದ್ಯದಲ್ಲಿಯೇ ಹೊಂಬಾಳೆ ಫಿಲ್ಲಿಂಸ್ ಪ್ರೋಢಕ್ಷನ್ ಹೌಸ್ ನಿಂದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಈ ಮಧ್ಯೆ  ಪ್ರಸ್ತುತ ಚಿತ್ರದ ನಾಯಕಿ ಸಯೀಷಾ ಭಾಗದ ಚಿತ್ರೀಕರಣ ನಡೆಯುತ್ತಿದೆ.  ತಮಿಳು ಮೂಲಕ ಸಯೀಷಾ ಮೊದಲ ಬಾರಿಗೆ ಪುನೀತ್ ನಾಯಕಿ ನಟಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದಲ್ಲಿ ಧನಂಜಯ್ ವಿಲನ್ ಪಾತ್ರದಲ್ಲಿದ್ದು, ರಾಧಿಕಾ ಶರತ್ ಕುಮಾರ್ ಹಾಗೂ ಅರುಣ್ ಗೌಡ ಮತ್ತಿತರರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp