ಯೋಗರಾಜ್ ಭಟ್ಟರ 'ಗಾಳಿಪಟ-2' ನಲ್ಲಿ ಅದಿತಿ ಪ್ರಭುದೇವ ಮಿಂಚಿಂಗ್

ಯೋಗರಾಜ್ ಭಟ್ ಮುಂದಿನ ಚಿತ್ರ "ಗಾಳಿಪಟ-2" ನಲ್ಲಿ ನಟವರ್ಗವು ದೊಡ್ಡ ಸಂಖ್ಯೆಯಲ್ಲಿದೆ.ಈ ನಡುವೆ ಅದಿತಿ ಪ್ರಭುದೇವ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ.

Published: 02nd July 2019 12:00 PM  |   Last Updated: 02nd July 2019 11:20 AM   |  A+A-


Aditi Prabhudeva

ಅದಿತಿ ಪ್ರಭುದೇವ

Posted By : RHN RHN
Source : The New Indian Express
ಯೋಗರಾಜ್ ಭಟ್ ಮುಂದಿನ ಚಿತ್ರ "ಗಾಳಿಪಟ-2" ನಲ್ಲಿ ನಟವರ್ಗವು ದೊಡ್ಡ ಸಂಖ್ಯೆಯಲ್ಲಿದೆ.ಈ ನಡುವೆ ಅದಿತಿ ಪ್ರಭುದೇವ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ. ಇದಾಗಲೇ "ಸಿಂಗಾ", "ಆಪರೇಷನ್ ನಕ್ಷತ್ರ", "ತೋತಾಪುರಿ", "ರಂಗನಾಯಕಿ" ಚಿತ್ರಗಳು ಸೇರಿ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಅದಿತಿ ಸ್ಯಾಂಡಲ್ ವುಡ್ ನಲ್ಲಿ ಬ್ಯ್ಸಿ ಶೆಡ್ಯೂಲ್ ಹೊಂದಿದ ನಾಯಕೈಯರ ಪೈಕಿ ಒಬ್ಬರಾಗಿದ್ದಾರೆ. ಇದೀಗ ಮಹೇಶ್ ದನಣ್ನವರ್ ನಿರ್ಮಿಸುತ್ತಿರುವ ಬಹು ತಾರಾಂಗಣದ ಚಿತ್ರದ ಭಾಗವಾಗಿದ್ದಾರೆ.

"ಗಾಳಿಪಟ" ಸರಣಿಯ ಈ ಚಿತ್ರ ದಲ್ಲಿ ಶರಣ್, ಪವನ್ ಕುಮಾರ್, ರಿಷಿ, ಶರ್ಮೀಳಾ ಮಾಂಡ್ರೆ ಮತ್ತು ಸೋನಾಲ್ ಮಾಂಟೆರೋ ಕೂಡ ಇದ್ದಾರೆ. ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಚೀನೀ ಅಥವಾ ಕೊರಿಯಾದ ನಾಯಕಿ ಮತ್ತು ಪಶ್ಚಿಮ ಬಂಗಾಳದ ನಟ ಸೇರಿದಂತೆ ಇನ್ನೂ ಕೆಲವು ನಟರನ್ನು ಅಂತಿಮಗೊಳಿಸಲು ಚಿತ್ರತಂಡ ಸಜ್ಜಾಗಿದೆ.

ಭಟ್ಟರ  ಕಥಾಹಂದರವು ಬೆಂಗಳೂರು, ಮಂಡ್ಯ ಮತ್ತು ಧಾರವಾಡದ ವಿಭಿನ್ನ ಹಿನ್ನೆಲೆಗಳಿಗೆ ಸೇರಿದ ಮೂವರು ಯುವಕರ ಜೀವನವನ್ನು ಒಳಗೊಂಡಿದ್ದು ಈ ಚಿತ್ರದ ಚಿತ್ರೀಕರಣವನ್ನು ಕರ್ನಾಟಕ ಮತ್ತು ಲಂಡನ್‌ ಗಳಲ್ಲಿ ನಡೆಸಲಾಗುವುದು.  ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಲಿದ್ದು, ಜಯಂತ್  ಕಾಯ್ಕಿಣಿ ಸಾಹಿತ್ಯ ದ್ವೈತ ಗುರುಮೂರ್ತಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp