ದರ್ಶನ್ ಹಾಕಿದ ಚಾಲೆಂಜ್ ಕೇಳಿ ಸೆಲೆಬ್ರಿಟಿ (ಅಭಿಮಾನಿ)ಗಳು ಶಾಕ್, ಏನದು ಚಾಲೆಂಜ್!

ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಿಢೀರ್ ಟ್ವೀಟ್ ವೊಂದನ್ನು ಮಾಡಿ ಅದರಲ್ಲಿ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್.

Published: 02nd July 2019 12:00 PM  |   Last Updated: 02nd July 2019 01:48 AM   |  A+A-


Darshan

ದರ್ಶನ್

Posted By : VS
Source : Online Desk
ಬೆಂಗಳೂರು: ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದಿಢೀರ್ ಟ್ವೀಟ್ ವೊಂದನ್ನು ಮಾಡಿ ಅದರಲ್ಲಿ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್. ಮಧ್ಯಾಹ್ನ ಫೇಸ್ ಬುಕ್ ಲೈವ್ ಬರುವುದಾಗಿ ಹೇಳಿದ್ದ ದರ್ಶನ್ ಇದೀಗ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ದರ್ಶನ್ ಅವರು ಕುರುಕ್ಷೇತ್ರ ಚಿತ್ರದ ಕುರಿತಂತೆ ಮಾತನಾಡಿದರು. ನನಗೆ ಅಭಿಮಾನಿಗಳೇ ಸೆಲೆಬ್ರಿಟಿ. ಹೀಗಾಗಿ ಕುರುಕ್ಷೇತ್ರ ಚಿತ್ರದ ಕುರಿತು ತಪ್ಪಾಗಿ ಯಾರು ಮಾತನಾಡಬಾರದು. ಕುರುಕ್ಷೇತ್ರ ಚಿತ್ರದಲ್ಲಿ ಅಪ್ಪಾಜಿ(ಅಂಬರೀಶ್), ರವಿಚಂದ್ರನ್, ಅರ್ಜುನ್ ಸರ್ಜಾ ಮತ್ತು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೊಡ್ಡ ತಾರಾಗಣವಿದೆ. ಹೀಗಾಗಿ ಇಲ್ಲಿ ಎಲ್ಲಾ ನಟರಿಗೂ ಸಮಾನ ಸ್ಥಾನಗಳಿರುತ್ತವೆ.

ಕುರುಕ್ಷೇತ್ರದಂತಾ ಭಾರೀ ಬಜೆಟ್ ಚಿತ್ರವನ್ನು ನಿರ್ಮಿಸುವುದು ಅಸಾಧ್ಯ. ಆದರೆ ಮುನಿರತ್ನ ಅವರು ಈ ಪ್ರಯತ್ನ ಮಾಡಿದ್ದಾರೆ. ಕುರುಕ್ಷೇತ್ರದಂತಾ ದೊಡ್ಡ ಸಿನಿಮಾವನ್ನು ನಿರ್ಮಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಸಿನಿಮಾವನ್ನು ಸಿನಿಮಾದಂತೆ ಮಾತ್ರ ನೋಡಿ ಎಂದು ಚಾಲೆಂಜ್ ಹಾಕಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp