ಮತ್ತೆ ಬೆಳ್ಳಿ ಪರದೆ ಮೇಲೆ ಒಲವೇ ಮಂದಾರ 2!

2011ರಲ್ಲಿ ಬಿಡುಗಡೆಯಾಗಿದ್ದ ಒಲವೇ ಮಂದಾರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಇದೇ ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
2011ರಲ್ಲಿ ಬಿಡುಗಡೆಯಾಗಿದ್ದ ಒಲವೇ ಮಂದಾರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಇದೇ ಅದೇ ಹೆಸರಿನಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ.
ಎಸ್ ಆರ್ ಪಾಟೀಲ್ ತಮ್ಮ ಮುಂದಿನ ನಿರ್ದೇಶನದ ಚಿತ್ರಕ್ಕೆ ಒಲವೇ ಮಂದಾರ 2 ಎಂದು ಶೀರ್ಷಿಕೆ ಇಟ್ಟಿದ್ದಾರೆ. ಈ ಚಿತ್ರಕ್ಕೂ ಮೂಲ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಶೀರ್ಷಿಕೆಯನ್ನು ಮಾತ್ರ ತೆಗೆದುಕೊಂಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಚಿತ್ರವನ್ನು ಚೇತನ್ ರಾಜ್ ಮತ್ತು ರಮೇಶ್ ಮಾರ್ಗೋಲ್ ಮತ್ತು ಟಿಎಂ ಸತೀಶ್ ನಿರ್ಮಾಣ ಮಾಡುತ್ತಿದ್ದು 2014ರಲ್ಲಿ ಫೇಸ್ ಆಫ್ ಬೆಂಗಳೂರು ಚಿತ್ರದಲ್ಲಿ ನಟಿಸಿದ್ದ ಸನತ್ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಲವೇ ಮಂದಾರ 2 ಚಿತ್ರಕ್ಕೆ ಕಿರಣ್ ತೊಟ್ಟಂಬ್ಲೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com