ಹಿಂದಿಯಲ್ಲಿ ಬರೋಲ್ವಂತೆ ವಿಜಯ್-ರಶ್ಮಿಕಾ ಜೋಡಿಯ 'ಡಿಯರ್ ಕಾಮ್ರೆಡ್'!

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಯ " 'ಡಿಯರ್ ಕಾಮ್ರೇಡ್' ಸಿನಿಮಾ ಇದೇ ಜುಲೈ 26ರಂದು ಬಿಡುಗಡೆಯಾಗುತ್ತಿದೆ. “ಈ ಚಿತ್ರವು ನಮ್ಮೆಲ್ಲರಿಗೂ ವೈಯಕ್ತಿಕ ನೆನಪನ್ನು....

Published: 13th July 2019 12:00 PM  |   Last Updated: 13th July 2019 12:58 PM   |  A+A-


Dear Comrade

'ಡಿಯರ್ ಕಾಮ್ರೆಡ್'

Posted By : RHN RHN
Source : The New Indian Express
ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಜೋಡಿಯ " 'ಡಿಯರ್ ಕಾಮ್ರೇಡ್' ಸಿನಿಮಾ ಇದೇ ಜುಲೈ 26ರಂದು ಬಿಡುಗಡೆಯಾಗುತ್ತಿದೆ. “ಈ ಚಿತ್ರವು ನಮ್ಮೆಲ್ಲರಿಗೂ ವೈಯಕ್ತಿಕ ನೆನಪನ್ನು ತರಲಿದೆ.ಡಿಯರ್ ಕಾಮ್ರೇಡ್ಅದ್ಭುತ ಸಂಗೀತವನ್ನು ಒಳಗೊಂಡಿದೆ.ಣಾವು ನಮ್ಮ ಜತೆಗಿರುವ ಜನರೊಡನೆ ಆಚರಿಸಲು ಬಯಸುತ್ತೇವೆ" ಬೆಂಗಳುರಿನಲ್ಲಿ ನಟ ವಿಜಯ್ ಹೇಳಿದ್ದಾರೆ. 

ಭರತ್ ಕಮ್ಮ ಕಮ್ಮ ನಿರ್ದೇಶನದ ಈ ಚಿತ್ರದ ಕನ್ನಡ ಟ್ರೇಲರ್ ಬಿಡುಗಡೆಯಾಗಿದೆ. ತೆಲುಗಿನಲ್ಲಿ ತಯಾರಾದ ಈ ಚಿತ್ರವನ್ನು ಏಕಕಾಲದಲ್ಲಿ ಡಬ್ ಮಾಡಿ ಇತರ ಮೂರು ದಕ್ಷಿಣ ಭಾರತದ ಭಾಷೆಗಳಾದ ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ತರುವುದಆಗಿ ಹೇಳಿದ್ದಾರೆ. “ಈ ಚಿತ್ರವನ್ನು ಹಿಂದಿಯಲ್ಲಿ ಡಬ್ ಮಾಡಲಾಗುವುದಿಲ್ಲ. . ಕಾರಣ, ಡಿಯರ್ ಕಾಮ್ರೆಡ್  ಭೌಗೋಳಿಕತೆ ಮತ್ತು ಸಂಸ್ಕೃತಿಯ ಕಾರಣದಿಂದಾಗಿ ದಕ್ಷಿಣ ಭಾರತಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ನಾನು ನಂಬುತ್ತೇನೆ. ಈ ಚಿತ್ರವು ಒಂದು ಸಣ್ಣ ಪಟ್ಟಣ ಹಾಗೂ ನಗರದ ಜೀವನವನ್ನು ಒಳಗೊಂಡಿದೆ. ಇದು ದಕ್ಷಿಣ ಭಾರತದ ಸಂಸ್ಕೃತಿಗೆ ಹೆಚ್ಚು ಸೂಕ್ತವಾಗಿದೆ. " ಅವರು ಹೇಳಿದ್ದಾರೆ.

ಇನ್ನು ಡಿಯರ್ ಕಾಮ್ರೆಡ್ ಕನ್ನಡ ಅವತರಣಿಕೆಗಾಗಿ ರಶ್ಮಿಕಾ ಸ್ವತಃ ಡಬ್ ಮಾಡಿದ್ದಾರೆ./  ಕನ್ನಡ ಆವೃತ್ತಿಗೆ ರಶ್ಮಿಕಾ ಮಂದಣ್ಣ ತನ್ನ ಭಾಗಗಳನ್ನು ಡಬ್ ಮಾಡಿದ್ದಕ್ಕೆ ಸಂತೋಷವಾಗಿದೆ. "ತೆಲುಗು ಚಲನಚಿತ್ರವನ್ನು ಇತರ ಮೂರು ಭಾಷೆಗಳಲ್ಲಿ ಡಬ್ ಮಾಡಿ  ಬಿಡುಗಡೆ ಮಾಡಲಾಗುವುದು ಎಂದು ನಾನು ಹೇಳಿದ ಕ್ಷಣದಲ್ಲೇ ನನ್ನ ಭಾಗಗಳನ್ನು ಕನ್ನಡಕ್ಕೆ ಡಬ್ ಮಾಡುವುದಾಗಿ ನಾನು ಅವರಿಗೆ ಹೇಳಿದೆ" ಎಂದು ರಶ್ಮಿಕಾ ಹೇಳಿದ್ದಾರೆ. "ಕರ್ನಾಟಕದ ನನ್ನ ಎಲ್ಲ ಅಭಿಮಾನಿಗಳಿಗೆ ಬೆಳ್ಳಿ ಪರದೆ ಮೇಲೆ ಇನ್ನೊಮ್ಮೆ ನನ್ನನ್ನು ನೋಡುವ ಅವಕಾಶವಿದೆ. ಇದು ನನ್ನಿಂದ ಅವರಿಗೆ ಮತ್ತೊಂದು ಕನ್ನಡ ಚಿತ್ರವೆಂದು ನಾನು ಭಾವಿಸುತ್ತೇನೆ. ಡಿಯರ್ ಕಾಮ್ರೆಡ್ ನನ್ನ ಹೃದಯಕ್ಕೆ ಬಹಳ ಹತ್ತಿರವಿರುವ ಚಿತ್ರ, ಮತ್ತು ಅದನ್ನು ಕನ್ನಡದಲ್ಲೂ ಹೊಂದಲು ನನಗೆ ಸಂತೋಷವಾಗಿದೆ. ”ನಟಿ ಹೇಳಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp