ಕೋಟಿಗೊಬ್ಬ-3 ಚಿತ್ರೀಕರಣ ಪ್ರಾರಂಭಿಸಿದ ಪೈಲ್ವಾನ್!

ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗಿರುವ ನಟ ಸುದೀಪ್ ಈಗ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Published: 15th July 2019 12:00 PM  |   Last Updated: 15th July 2019 01:09 AM   |  A+A-


Pailwaan  hero resumes shoot for Kotigobba 3

ಕೋಟಿಗೊಬ್ಬ-3 ಚಿತ್ರೀಕರಣ ಪ್ರಾರಂಭಿಸಿದ ಪೈಲ್ವಾನ್!

Posted By : SBV SBV
Source : Online Desk
ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗಿರುವ ನಟ ಸುದೀಪ್ ಈಗ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಹೈದರಾಬಾದ್ ನಲ್ಲಿ ಸೋಮವಾರದಿಂದ ಚಿತ್ರೀಕರಣ ನಡೆಯುತ್ತಿದ್ದು, ರಾಮೂಜಿ ಫಿಲ್ಮ್ ಸಿಟಿಯಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ. 

ಈ ಸಿನಿಮಾ ಶಿವ ಕಾರ್ತಿಕ್ ನ ಮೊದಲ ಸಿನಿಮಾ ಆಗಿದ್ದು, ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಮಡೋನಾ ಸೆಬಾಸ್ಟಿಯನ್, ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಶ್ರದ್ಧಾ ದಾಸ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 

15 ದಿನಗಳ ಕಾಲ ಚಿತ್ರೀಕರಣ ನಿಗದಿಯಾಗಿದ್ದು, ನಂತರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. 

ಕೋಟಿಗೊಬ್ಬ-2 ಚಿತ್ರಕ್ಕೆ ನಿರ್ಮಾಪಕರಾಗಿದ್ದ ಸೂರಪ್ಪ ಬಾಬು ಹಾಗೂ ಸುದೀಪ್ ಈ ಚಿತ್ರದಲ್ಲೂ ಜೊತೆಗೂಡಿದ್ದು, ಕೋಟಿಗೊಬ್ಬ-3 ಚಿತ್ರಕ್ಕೆ ಸುದೀಪ್ ಚಿತ್ರಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಶೇಖರ್ ಚಂದ್ರು  ಛಾಯಾಗ್ರಹಣ ಇದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp