ಮುನಿರತ್ನ 'ಕುರುಕ್ಷೇತ್ರ'ದಲ್ಲಿ ಮಹಿಳೆಯರ ದರ್ಬಾರ್: ಯಾವ ನಟಿಗೆ ಯಾವ ಪಾತ್ರ?

ಭಾರತೀಯ ಪೌರಾಣಿಕ ಕಥೆಗಳಲ್ಲಿ ಮಹಿಳೆಯರದ್ದೇ ಪ್ರಧಾನ ಪಾತ್ರ, ಹೀಗಾಗಿ ಮುನಿರತ್ನ ಕುರುಕ್ಷೇತ್ರದಲ್ಲೂ ಕೂಡ ಮಹಿಳೆ ಪ್ರಾಧಾನ್ಯತೆ ಪ್ರತಿಬಿಂಬಿಸಿದೆ, ಜೆಕೆ ಭಾರವಿ ಬರೆದಿರುವ ..
ಮುನಿರತ್ನ ಕುರುಕ್ಷೇತ್ರದಲ್ಲಿ ಮಹಿಳೆಯರ ದರ್ಬಾರ್
ಮುನಿರತ್ನ ಕುರುಕ್ಷೇತ್ರದಲ್ಲಿ ಮಹಿಳೆಯರ ದರ್ಬಾರ್
ಭಾರತೀಯ ಪೌರಾಣಿಕ ಕಥೆಗಳಲ್ಲಿ ಮಹಿಳೆಯರದ್ದೇ ಪ್ರಧಾನ ಪಾತ್ರ, ಹೀಗಾಗಿ ಮುನಿರತ್ನ ಕುರುಕ್ಷೇತ್ರದಲ್ಲೂ ಕೂಡ ಮಹಿಳೆ ಪ್ರಾಧಾನ್ಯತೆ ಪ್ರತಿಬಿಂಬಿಸಿದೆ, ಜೆಕೆ ಭಾರವಿ ಬರೆದಿರುವ ಕುರುಕ್ಷೇತ್ರ ಸಿನಿಮಾವನ್ನು ಮುನಿರತ್ನ  ನಿರ್ಮಾಣ ಮಾಡಿ,ನಾಗಣ್ಣ ನಿರ್ದೇಶನ ಮಾಡಿದ್ದಾರೆ.
ರನ್ನನ ಗದಾಯುದ್ದ ಪದ್ಯದಿಂದ ಆರಿಸಿಕೊಳ್ಳಲಾಗಿದೆ, ಧುರ್ಯೋಧನನ ದೃಷ್ಟಿಯಿಂದ ಆರಿಸಿಕೊಳ್ಳಲಾಗಿದೆ,ಇದು ದರ್ಶನ್ ಅವರ 50ನೇ ಸಿನಿಮಾ ಕೂಡ ಆಗಿದೆ.
ಕುರುಕ್ಷೇತ್ರದಲ್ಲಿ ಹಲವು ನಟಿಯರು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ,. ಅವರ ವಿವರ ಇಲ್ಲಿದೆ, ಸ್ನೇಹ-ದ್ರೌಪದಿ , ಭಾನುಮತಿಯಾಗಿ- ಮೇಘನಾ ರಾಜ್, ಹರಿಪ್ರಿಯಾ ಮತ್ತು ಅದಿತಿ ಆರ್ಯ, ಮಾಯೆ ಮತ್ತು ಉತ್ತರೆ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನೂ ಪ್ರಮುಖವಾದ ಕುಂತಿ ಪಾತ್ರದಲ್ಲಿ ಭಾರತಿ ವಿಷ್ಣುವರ್ಧನ್, ಗಾಂಧಾರಿಯಾಗಿ ಅನುಪಮಾ ಮತ್ತು ಪವಿತ್ರ ಲೋಕೇಶ್ ಅರ್ಜುನನ ಪತ್ನಿ ಸುಭದ್ರೆಯಾಗಿ ಕಾಣಿಸಿಕೊಂಡಿದ್ದಾರೆ.
ಮಹಿಳೆಯರಿಲ್ಲದೇ ಮಹಾಭಾರತ ಅಪೂರ್ಣ, ಮಹಾಭಾರತದಲ್ಲಿ ಪ್ರತಿ ಹೆಣ್ಣಿನ ಪಾತ್ರಕ್ಕೂ ಅದರದ್ದೇ ಗೌರವ ಹಾಗೂ ತೂಕವಿದೆ, ಈ ನಟಿಯರನ್ನು ಹೊರತು ಪಡಿಸಿ ನೂರಾರು ಮಹಿಳಾ ಕಲಾವಿದರು ಜ್ಯೂನಿಯರ್ ಆರ್ಟಿಸ್ಟ್ ಗಳಾಗಿ ಕೆಲಸ ಮಾಡಿದ್ದಾರೆ. ಈ 3ಡಿ ಸಿನಿಮಾ ನೋಡುವಾಗ ನಿಮಗೆ ಹಬ್ಬದ  ಮನಸ್ಥಿತಿ ಬರುತ್ತದೆ ಎಂದು ನಿರ್ದೇಶಕ ನಾಗಣ್ಣ ಹೇಳಿದ್ದಾರೆ.
ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ವಸ್ತ್ರ ವಿನ್ಯಾಸ ಮಾಡಲಾಗಿಸಲಾಗಿದೆ, ಆ ಕಾಲದಲ್ಲಿ ಜನರು ಧರಿಸುತ್ತಿದ್ದ ಉಡುಪುಗಳ ಬಗ್ಗೆ ಮಾಹಿತಿ ಕಲೆ ಹಾಕಿ ವಸ್ತ್ರ ವಿನ್ಯಾಸ ಮಾಡಿಸಿದ್ದಾಗಿ ನಾಗಣ್ಣ ತಿಳಿಸಿದ್ದಾರೆ, 
ನಾಲ್ಕು ಮಹಿಳಾ ಪಾತ್ರಗಳಿಗೆ ಹಾಡುಗಳಿವೆ, ವಿ, ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ, ನಲ್ಲ ನಾಗೇಂದ್ರ ಸಾಹಿತ್ಯ ಬರೆದಿದ್ದಾರೆ. ಧುರ್ಯೋಧನ ಮತ್ತು ಭಾನುಮತಿ ಅಂದರೆ ದರ್ಶನ್ ಮತ್ತು ಮೇಘನಾ ರಾಜ್ ಗಾಗಿ ಒಂದು ಹಾಡು ಮಾಡಲಾಗಿದೆ, ಈ ಹಾಡು ಯೂ ಟ್ಯೂಬ್ ನಲ್ಲಿ 1 ಮಿಲಿಯನ್ ವೀಕ್ಷಣೆ ಕಂಡಿದೆ. ಸಿನಿಮಾ ರಿಲೀಸ್ ಆಗುವ ಮೊದಲೇ ಇನ್ನೊಂದು ಹಾಡು ಬಿಡುಗಡೆ  ಮಾಡಲಾಗುವುದು ಎಂದು ನಾಗಣ್ಣ ಹೇಳಿದ್ದಾರೆ.
ಸುಮಾರು 100 ಕೋಟಿ ರು ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕನ್ನಡದಲ್ಲಿ 2ಡಿ ಮತ್ತು 3ಡಿ ಯಲ್ಲಿ ಸಿದ್ದವಾಗಿದೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಹಂಚಿಕೆಯಾಗಿದೆ. ತಮಿಳು ಮತ್ತು ತೆಲುಗು ಹಾಗೂ ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಡಬ್ ಆಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com