ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶ್ರುತಿ ಹರಿಹರನ್

ಕನ್ನಡ ಚಿತ್ರನಟಿ ಶ್ರುತಿ ಹರಿಹರನ್ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಸದ್ಯ ನಟಿ ಗರ್ಭಿಣಿಯಾಗಿದ್ದು ಈ ವಿಚಾರವನ್ನು ಅವರೇ ಸ್ವತಃ ತಮ್ಮ ಫೇಸ್ ಬುಕ್, ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Published: 16th July 2019 12:00 PM  |   Last Updated: 16th July 2019 08:45 AM   |  A+A-


Sruthi Hariharan

ಶ್ರುತಿ ಹರಿಹರನ್

Posted By : RHN RHN
Source : Online Desk
ಕನ್ನಡ ಚಿತ್ರನಟಿ ಶ್ರುತಿ ಹರಿಹರನ್ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಸದ್ಯ ನಟಿ ಗರ್ಭಿಣಿಯಾಗಿದ್ದು ಈ ವಿಚಾರವನ್ನು ಅವರೇ ಸ್ವತಃ ತಮ್ಮ ಫೇಸ್ ಬುಕ್, ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

"ನಿನ್ನನ್ನು ನೋಡುವ ಕಾತುರ ನನಗೆ ತಾಳಲಾಗುತ್ತಿಲ್ಲ, ಈ ಸರ್ಕಸ್ ಗೆ ನಿನಗೆ ಸ್ವಾಗತ, ನಿನ್ನನ್ನು ಕಾಣಲು ನಿನ್ನ ತಂದೆ ರಾಮ್ ಕಳಾರಿ ಸಹ ಉತ್ಸುಕರಾಗಿದ್ದಾರೆ" ನಟಿ ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರ "ಹ್ಯಾಪಿ ನ್ಯೂ ಇಯರ್" ನಂತರ ಶ್ರುತಿ ಹರಿಹರನ್-ರಾಮ್ ಅವರ ವಿವಾಹವಾಗಿತ್ತು. ಇಬ್ಬರೂ ಹೆಚ್ಚು ಸದ್ದು ಗದ್ದಲವಿಲ್ಲದೆ ವಿವಾಹವಾಗಿದ್ದು 2017ರ ನವೆಂಬರ್ ನಲ್ಲಿ ಬ್ಜಾಲತಾಣವೊಂದರ ವರದಿ ಮೂಲಕ ಬಹಿರಂಗವಾಗಿತ್ತು.

ಕೇರಳದಲ್ಲಿ ನೃತ್ಯ ಮಾಸ್ಟರ್ ಆಗಿರುವ ರಾಮ್ ಅಲ್ಲಿನ ಪ್ರಸಿದ್ದ ಸಮರ ಕಲೆ ಕಲರಿ ಪಟ್ಟು ಕಲಾವಿದರಾಗಿ ಅಂತರಾಷ್ಟ್ರೀಯ ಮನ್ನಣೆ ಗಿಟ್ಟಿಸಿದ್ದಾರೆ.

ಇನ್ನು ಕಳೆದ ವರ್ಷ ನಟ ಅರ್ಜುನ್ ಸರ್ಜಾ ವಿರುದ್ಧ "ಮೀಟೂ" ಆರೋಪ ಮಾಡಿದ್ದ ವೇಳೆ ಅವರು ಮದುವೆಯಾಗಿರುವ ವಿಚಾರ ಬಹಿರಂಗವಾಗಿತ್ತು.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp