ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ್ ಚಿತ್ರಕ್ಕೆ ಆಕಾಂಕ್ಷಾ ಶರ್ಮಾ ನಾಯಕಿ!

ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೆ ಪುತ್ರ ವಿಕ್ರಮ್ ರವಿಚಂದ್ರನ್ ಚೊಚ್ಚಲ ಚಿತ್ರವನ್ನು ಸಹನಾ ಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಹೈ ವೋಲ್ಟೇಜ್ ಲವ್ ಸ್ಟೋರಿಗೆ ಮುಂಬೈ ...
ವಿಕ್ರಮ್ ರವಿಚಂದ್ರನ್ ಮತ್ತು ಆಕಾಂಕ್ಷಾ ಸಿಂಗ್
ವಿಕ್ರಮ್ ರವಿಚಂದ್ರನ್ ಮತ್ತು ಆಕಾಂಕ್ಷಾ ಸಿಂಗ್
ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೆ ಪುತ್ರ ವಿಕ್ರಮ್ ರವಿಚಂದ್ರನ್ ಚೊಚ್ಚಲ ಚಿತ್ರವನ್ನು ಸಹನಾ ಮೂರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಹೈ ವೋಲ್ಟೇಜ್ ಲವ್ ಸ್ಟೋರಿಗೆ ಮುಂಬೈ ಬೆಡಗಿ ನಾಯಕಿಯಾಗಲಿದ್ದಾರೆ.
ಈಗಾಗಲೆ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರೀಕರಣಕ್ಕೆ ಸಿದ್ಧರಾಗಿರುವ ವಿಕ್ರಮ್ ಮತ್ತು ತಂಡಕ್ಕೆ ನಾಯಕಿಯ ಎಂಟ್ರಿಯಾಗಿದೆ. ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿಮಿಕ್ರಮ ಚಿತ್ರಕ್ಕೆ ಆಕಾಂಕ್ಷಾ ಶರ್ಮಾ ನಾಯಕಿಯಾಗಿದ್ದಾರೆ.
ಕನ್ನಡದ ಹುಡುಗಿಯೆ ಬೇಕು ಎನ್ನುತ್ತಿದ್ದ ಚಿತ್ರತಂಡವೀಗ ಮುಂಬೈ ಬೆಡಗಿಯನ್ನು ಕರೆದುಕೊಂಡು ಬಂದಿದ್ದಾರೆ. ವಿಕ್ರಮ್ ಜೊತೆ ಆಕಾಂಕ್ಷ ಶರ್ಮ ಡ್ಯುಯೆಟ್ ಹಾಡಲಿದ್ದಾರೆ.
ಆಗಸ್ಟ್ 10 ರಂದು ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ರಾಜಸ್ತಾನ, ದಾಂಡೇಲಿ, ಬೆಂಗಳೂರು ಮತ್ತು ಸಿಂಗಾಪೂರ್ ಗಳಲ್ಲಿ ಶೂಟಿಂಗ್ ನಡೆಯಲಿದೆ.
ತ್ರಿವಿಕ್ರಮ ಸಿನಿಮಾಗೆ ಖ್ಯಾತ ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಪ್ರಭುದೇವ ನೃತ್ಯ ಸಂಯೋಜನೆ ಮಾಡುವ ಸಾಧ್ಯತೆ ಇದೆ. ಈಗಾಗಲೆ ಪ್ರಭುದೇವ ಜೊತೆ ಮಾತುಕತೆ ನಡೆಸಿರುವ ಚಿತ್ರತಂಡಕ್ಕೆ ಪ್ರಭುದೇವ ಕಡೆ ಗ್ರೀನ್ ಸಿಗ್ನಲ್ ಸಿಗಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com