ಪೋಸ್ಟರ್ ಡಿಸೈನರ್ ನಿಂದ ನಟನಾಗಿ ಬಡ್ತಿ ಪಡೆದ ಅಭಿಲಾಷ್

ಪೋಸ್ಟರ್ ವಿನ್ಯಾಸದಿಂದ ಹಿಡಿದು ಅಲ್ಲಿಂದ ಪಾತ್ರದ ನಟನಾಗಿ, ಸಹಾಯಕ ನಿರ್ದೇಶಕನಾಗಿ ಚಿತ್ರತಂಡದಲ್ಲಿ ವಿವಿಧ ...

Published: 20th July 2019 12:00 PM  |   Last Updated: 20th July 2019 02:04 AM   |  A+A-


Abhilash

ಅಭಿಲಾಷ್

Posted By : SUD SUD
Source : The New Indian Express
ಪೋಸ್ಟರ್ ವಿನ್ಯಾಸದಿಂದ ಹಿಡಿದು ಅಲ್ಲಿಂದ ಪಾತ್ರದ ನಟನಾಗಿ, ಸಹಾಯಕ ನಿರ್ದೇಶಕನಾಗಿ ಚಿತ್ರತಂಡದಲ್ಲಿ ವಿವಿಧ ಕೆಲಸಗಳನ್ನು ಮಾಡಿದ ಅಭಿಲಾಷ್ ಇಂದು ನಟನಾಗಿ ಗುರುತಿಸಬೇಕಾದರೆ ಅವರ ಪ್ರಯಾಣ ಸುದೀರ್ಘವಾಗಿದೆ.

ರವಿಚಂದ್ರನ್ ಅಭಿನಯದ ದಶರಥ ಚಿತ್ರದಲ್ಲಿ ಅಭಿಲಾಷ್ ವಿಲನ್ ಪಾತ್ರ ಮಾಡುತ್ತಿದ್ದಾರೆ. ಕ್ರೇಜಿ ಸ್ಟಾರ್ ಜೊತೆ ಚಿತ್ರದಲ್ಲಿ ಮುಖಾಮುಖಿಯಾಗಿ ಅಭಿನಯಿಸುತ್ತಿದ್ದಾರೆ.

ನಟನಾಗಬೇಕೆಂಬ ಆಸೆಯಿಂದ ಅಭಿಲಾಷ್ ಚಿತ್ರರಂಗಕ್ಕೆ ಕಾಲಿಟ್ಟರಂತೆ. ಆದರೆ ಅಲ್ಲಿನ ಪರಿಸ್ಥಿತಿ ಪೋಸ್ಟರ್ ಬಾಯ್ ಕೆಲಸವನ್ನು ಆರಂಭಿಸುವಂತೆ ಮಾಡಿತು. ನಂತರ ವಿರಾಟ್, ಬುಗುರಿ, ಒಂದು ರೊಮ್ಯಾಂಟಿಕ್ ಕಥೆ ಮತ್ತು ಮುಫ್ತಿಯಲ್ಲಿ ಹಲವು ಪಾತ್ರಗಳನ್ನು ಮಾಡಿದ್ದಾರೆ. 

ನಿರ್ದೇಶಕ ಎಂ ಡಿ ಶ್ರೀಧರ್ ಜೊತೆಗೆ ಸಹಾಯಕ ನಿರ್ದೇಶಕರಾಗಿ ದುಡಿದರಂತೆ. ಯಾರ್ ಯಾರೋ ಗೋರಿ ಮೇಲೆ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 

ರಾಘವೇಂದ್ರ ರಾಜ್ ಕುಮಾರ್ ಅವರ ಆಡಿಸಿದಾತ, ಅಜಯ್ ರಾವ್ ಜೊತೆಗೆ ಕೃಷ್ಣ ಟಾಕೀಸ್ ಚಿತ್ರದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp