`ಕಾಣದಂತೆ ಮಾಯವಾದನು’ ಚಿತ್ರಕ್ಕೊಂದು ಟ್ಯಾಗ್‍ಲೈನ್ ಕೊಡಿ, 50 ಸಾವಿರ ಗೆಲ್ಲಿ!

ಬ್ಯಾಕ್‍ಬೆಂಚರ್ಸ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಚಂದ್ರಶೇಖರ್‍ನಾಯ್ಡು, ಸೋಮ್‍ಸಿಂಗ್ ಹಾಗೂ ಪುಷ್ಪ ಸೋಮ್‍ಸಿಂಗ್ ಸೇರಿ ನಿರ್ಮಿಸಿರುವ `ಕಾಣದಂತೆ ಮಾಯವಾದನು` ಹಾರರ್....
`ಕಾಣದಂತೆ ಮಾಯವಾದನು’ ಚಿತ್ರದ ದೃಶ್ಯ
`ಕಾಣದಂತೆ ಮಾಯವಾದನು’ ಚಿತ್ರದ ದೃಶ್ಯ
ಬ್ಯಾಕ್‍ಬೆಂಚರ್ಸ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಚಂದ್ರಶೇಖರ್‍ನಾಯ್ಡು, ಸೋಮ್‍ಸಿಂಗ್ ಹಾಗೂ ಪುಷ್ಪ ಸೋಮ್‍ಸಿಂಗ್ ಸೇರಿ ನಿರ್ಮಿಸಿರುವ `ಕಾಣದಂತೆ ಮಾಯವಾದನು` ಹಾರರ್ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಯೂಟ್ಯೂಬ್‍ನಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ ಟ್ರೇಲರ್ ವೀಕ್ಷಿಸಿದ ನಟ ಪುನೀತ್ ರಾಜಕುಮಾರ್ ಕೂಡ ಮೆಚ್ಚಿಕೊಂಡಿದ್ದಾರೆ ಈಗ ಚಿತ್ರತಂಡ ಸಿನಿಸಿಕರಿಗೆ ಹೊಸದೊಂದು ಕಾಂಟೆಸ್ಟ್ ಏರ್ಪಡಿಸಿದೆ ಅದೇನೆಂದರೆ ಯೂಟ್ಯೂಬ್‍ನಲ್ಲಿ ಕಾಣದಂತೆ ಮಾಯವಾದನು ಚಿತ್ರದ ಟ್ರೈಲರ್ ಕೆಳಗಿರುವ ಕಮೆಂಟ್ ಬಾಕ್ಸ್ ನಲ್ಲಿ ಚಿತ್ರಕ್ಕೊಂದು ಟ್ಯಾಗ್‍ಲೈನ್ ಸೂಚಿಸಬೇಕು ಹೌದು, ತಮ್ಮ ಚಿತ್ರಕ್ಕೆ ಸೂಕ್ತ ಟ್ಯಾಗ್‍ಲೈನನ್ನು ಊಹಿಸಿ ಐವತ್ತು ಸಾವಿರ ರೂ.ಗಳ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಚಿತ್ರತಂಡ ಸಿನಿರಸಿಕರಿಗೆ ನೀಡಿದೆ
ಈ ಕಮೆಂಟ್ ಬಾಕ್ಸ್ ನಲ್ಲಿ ಯಾರು ಬೇಕಾದರೂ ಉಪಶೀರ್ಷಿಕೆಗಳನ್ನು ಬರೆಯಬಹುದು, ಅಲ್ಲದೆ ಎಷ್ಟು ಬೇಕಾದರೂ ಟ್ಯಾಗ್‍ಲೈನ್ ಸೂಚಿಸುವ ಅವಕಾಶವನ್ನು ಚಿತ್ರತಂಡ ನೀಡಿದೆ ಚಿತ್ರದ ಕಂಟೆಂಟ್‍ಗೆ ಹತ್ತಿರವಾದ ಹಾಗೂ ಸೆಲೆಕ್ಟ್ ಆದ ಟ್ಯಾಗ್‍ಲೈನ್‍ನ್ನು ಮೊದಲು ಸೂಚಿಸಿದವರಿಗೆ 50ಸಾವಿರ ರೂಪಾಯಿಗಳನ್ನು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನೀಡಲಾಗುವುದು. ಆಗಸ್ಟ್ ಮೊದಲವಾರ ಈ ಚಿತ್ರದ ಧ್ವನಿಸುರುಳಿ ಸಮಾರಂಭವನ್ನು ಚಿತ್ರತಂಡ ಆಯೀಜಿಸಿದೆ.
ರಾಜ್ ಪತ್ತಿಪಾಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪ್ರಥಮಪ್ರತಿ ಈಗಾಗಲೇ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮುಂದೆ ಬರಲಿದೆ. ಕರ್ನಾಟಕದ ಸುಂದರ ತಾಣಗಳಲ್ಲಿ ಈ ಚಿತ್ರವನ್ನು ಛಾಯಾಗ್ರಾಹಕ ಸುಜ್ಞಾನ್ ಅವರು ಚಿತ್ರೀಕರಿಸಿದ್ದಾರೆ. ಇನ್ನು ಚಿತ್ರಕ್ಕೆ ವಿಜಯ್ ಗುಮ್ಮನೇನಿ ಅವರ ಸಂಗೀತ ನಿರ್ದೇಶನವಿದೆ. ಸುರೇಶ್ ಆರ್ಮುಗಂ ಸಂಕಲನ, ವಿನೋದ್ ಸಾಹಸ ನಿರ್ದೇಶನ, ಧನು ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ, ಉಮೇಶ್ ಹಾಗೂ ಸರವಣ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.
ಈ ಹಿಂದೆ `ಜಯಮ್ಮನ ಮಗ` ಚಿತ್ರವನ್ನು ನಿರ್ದೇಶಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಸಿಂಧು ಲೋಕನಾಥ್ ಈ ಚಿತ್ರದ ನಾಯಕಿ. ಅಚ್ಯುತಕುಮಾರ್, ವಿನಯಪ್ರಸಾದ್, ಸುಚೇಂದ್ರ ಪ್ರಸಾದ್, ರಾಘವ್ ಉದಯ್, ಭಜರಂಗಿ ಲೋಕಿ, ಧರ್ಮಣ್ಣ, ಸೀತಾಕೋಟೆ, ಸನ್ನಿ ಮಹಿಪಾಲ್, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com