ಕನ್ನಡಿಗರ ಚಪ್ಪಾಳೆಯೇ ನಿಮ್ಮನ್ನು ಬೆಳೆಸಿದ್ದು: 'ಕನ್ನಡ್ ಗೊತ್ತಿಲ್ಲ' ಎಂದ 'ಕಿರಿಕ್' ನಟಿಗೆ ಜಗ್ಗೇಶ್ ಚಾಟಿ!

ಕಲೆಗೆ ದೇಶ, ಭಾಷೆ, ಜಾತಿಯ ಗಡಿಯಿಲ್ಲ ಎಂಬುದು ಸರಿ ಆದರೆ ತಮ್ಮ ನೆಲದ ಭಾಷೆಗೆ ಅಪಮಾನವಾಗುವಂತೆ ನಡೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಕನ್ನಡದ ಚಿತ್ರ ರಸಿಕರು...

Published: 24th July 2019 12:00 PM  |   Last Updated: 24th July 2019 01:30 AM   |  A+A-


Rashmika Mandanna-Jaggesh

ರಶ್ಮಿಕಾ ಮಂದಣ್ಣ-ಜಗ್ಗೇಶ್

Posted By : VS VS
Source : Online Desk
ಬೆಂಗಳೂರು: ಕಲೆಗೆ ದೇಶ, ಭಾಷೆ, ಜಾತಿಯ ಗಡಿಯಿಲ್ಲ ಎಂಬುದು ಸರಿ ಆದರೆ ತಮ್ಮ ನೆಲದ ಭಾಷೆಗೆ ಅಪಮಾನವಾಗುವಂತೆ ನಡೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಕನ್ನಡದ ಚಿತ್ರ ರಸಿಕರು ಅಪಾರವಾಗಿ ಮೆಚ್ಚಿಕೊಂಡಿದ್ದ ‘ಕಿರಿಕ್ ಪಾರ್ಟಿ’ ಚಿತ್ರದ ಸುಂದರಿ ರಶ್ಮಿಕಾಳ ನಡೆಯಿಂದಾಗಿ ಇಂತಹ ಪ್ರಶ್ನೆ ಉದ್ಭವವಾಗಿದ್ದು, ಕನ್ನಡಪರ ಸಂಘಟನೆಗಳು ರೊಚ್ಚಿಗೇಳುವಂತೆ ಮಾಡಿವೆ. 

ಪರ ರಾಜ್ಯಗಳಿಗೆ ಹೋಗಿ ಅಲ್ಲಿನ ಭಾಷೆ ಕಲಿಯುವುದರ ಜೊತೆಗೆ ಕನ್ನಡ ಪ್ರೇಮವನ್ನು ಮೆರೆಸುವ ಜನರ ನಡುವೆ, ಕನ್ನಡ ಗೊತ್ತಿಲ್ಲ ಎಂದು ಹೇಳುವ ಕನ್ನಡಿಗರಿರುವುದು ದುರಾದೃಷ್ಟಕರ ಎಂದು ನವರಸನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಜಗ್ಗೇಶ್ ಕನ್ನಡಪ್ರಭ.ಕಾಮ್ ಸುದ್ದಿಯನ್ನು ಕೊಟ್ ಮಾಡಿ ಟ್ವೀಟ್ ಮಾಡಿದ್ದು ಕನ್ನಡ ಚಿತ್ರರಂಗದ ಆಶೀರ್ವಾದ ಪಡೆದು ಬೆಳೆದು ಪರಭಾಷೆಗೆ ಹೋಗಿ ಅಲ್ಲಿಯು ಬೆಳೆದ ಅನೇಕ ಸ್ನೇಹಿತರಿದ್ದಾರೆ! ಅವರೆಲ್ಲ ಇಂದು ಕನ್ನಡಲ್ಲೆ ಮಾತಾಡಿ ಕನ್ನಡವನ್ನ ಅಪಾರ ಗೌರವಿಸುತ್ತಾರೆ ಅದು ಅವರ ಕನ್ನಡದ ಸಂಸ್ಕೃತಿ! ಆಗುಣವಿರದ ಇಂದಿನ ಪೀಳಿಗೆಯ ನಡಾವಳಿ ದುರಾದೃಷ್ಟಕರ ನಡೆ! ಕನ್ನಡ ಪ್ರೇಕ್ಷಕನ ಚಪ್ಪಾಳೆ ಬಿದ್ದೆ ನಿಮ್ಮ  ಬೆಳವಣಿಗೆ ಆದದ್ದುನೆನಪಿರಲಿ!
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp