ಅಭಿಮಾನಿಗಳಿಗೆ ದರ್ಶನ್ ಬಂಪರ್ ಗಿಫ್ಟ್, ಮುನಿರತ್ನ ಕುರುಕ್ಷೇತ್ರ ಜಬರ್ದಸ್ತ್ ಟ್ರೈಲರ್ ಬಿಡುಗಡೆ!

ಮುನಿರತ್ನ ಕುರುಕ್ಷೇತ್ರ ಚಿತ್ರದ ಮೊದಲ ಟ್ರೈಲರ್ ಈ ಹಿಂದೆ ಬಿಡುಗಡೆಯಾಗಿತ್ತು. ಅಂದು ಟ್ರೈಲರ್ ವೀಕ್ಷಿಸಿದ್ದ ಅಭಿಮಾನಿಗಳು ನಿರ್ಮಾಪಕರ ವಿರುದ್ಧ ಹಾರಿಹಾಯ್ದಿದ್ದರು. ಪವರ್ ಪಾಯಿಂಟ್ ನಲ್ಲಿ ವಿಡಿಯೋ ಮಾಡಿದಂತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮುನಿರತ್ನ ಕುರುಕ್ಷೇತ್ರ ಚಿತ್ರದ ಮೊದಲ ಟ್ರೈಲರ್ ಈ ಹಿಂದೆ ಬಿಡುಗಡೆಯಾಗಿತ್ತು. ಅಂದು ಟ್ರೈಲರ್ ವೀಕ್ಷಿಸಿದ್ದ ಅಭಿಮಾನಿಗಳು ನಿರ್ಮಾಪಕರ ವಿರುದ್ಧ ಹಾರಿಹಾಯ್ದಿದ್ದರು. ಪವರ್ ಪಾಯಿಂಟ್ ನಲ್ಲಿ ವಿಡಿಯೋ ಮಾಡಿದಂತಿದೆ. ಇನ್ನು ಕುರುಕ್ಷೇತ್ರಕ್ಕಿಂತ ಶನಿ ಧಾರವಾಹಿ ಅತ್ಯುತ್ತಮವಾಗಿದೆ ಎಂದೆಲ್ಲಾ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಚಿತ್ರದ ತಂಡ ಖಡಕ್ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ. 
ಇನ್ನು ಆಗಸ್ಟ್ 12ರಂದು ಪಂಚ ಭಾಷೆಗಳಲ್ಲಿ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ದರ್ಶನ್ ತಮ್ಮ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು ಚಿತ್ರದ ಎರಡನೇ ಟ್ರೈಲರ್ ಅನ್ನು ದರ್ಶನ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ.  
ಕನ್ನಡದ ಬಹುನಿರೀಕ್ಷಿತ ಮುನಿರತ್ನ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕುರುಕ್ಷೇತ್ರ ಪೌರಾಣಿಕ ಚಿತ್ರವಾಗಿದ್ದು 2ಡಿ ಮತ್ತು 3ಡಿಗಳಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com