ಗುಂಪು ಗಲಭೆ ವಿರೋಧಿಸಿ ಪ್ರಧಾನಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ ನಟನಿಗೆ ಜೀವಬೆದರಿಕೆ

ಗುಂಪು ಗಲಭೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಲೆಬ್ರೆಟಿಗಳು ಬರೆದಿದ್ದ ಪತ್ರಕ್ಕೆ ಸಹಿ ಹಾಕಿದ ನಟ ಕೌಶಿಕ್ ಸೇನ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೋನ್ ನಂಬರ್ ನ್ನು ಪಾರ್ವಡ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

Published: 25th July 2019 12:00 PM  |   Last Updated: 25th July 2019 06:56 AM   |  A+A-


koushik sen

ಕೌಶಿಕ್ ಸೇನ್

Posted By : ABN ABN
Source : PTI
ನವದೆಹಲಿ: ಗುಂಪು ಗಲಭೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆಲೆಬ್ರೆಟಿಗಳು ಬರೆದಿದ್ದ ಪತ್ರಕ್ಕೆ ಸಹಿ ಹಾಕಿದ ನಟ ಕೌಶಿಕ್ ಸೇನ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೋನ್ ನಂಬರ್ ನ್ನು ಪಾರ್ವಡ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಅಸಹಷ್ಣುತೆ ಮತ್ತು ಗುಂಪು ಗಲಭೆ ವಿರುದ್ಧದ  ಧ್ವನಿಯನ್ನು ನಿಲ್ಲಿಸದಿದ್ದರೆ ಹತ್ಯೆ ಮಾಡುವುದಾಗಿ ಅಪರಿಚಿತರೊಬ್ಬರು ನಿನ್ನೆ  ಕರೆ ಮಾಡಿದ್ದರು ಎಂದು ಸೇನ್  ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಪ್ರಕರಣದತ್ತ ಗಮನ ಹರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಮಾಣಿಕವಾಗಿದ್ದೇನೆ, ಇಂತಹ ಕರೆಗಳ ಬಗ್ಗೆ ತಲೆಕೆಡಿಸಿಕೊಳಲ್ಲ, ಪ್ರಧಾನಿಗೆ ಬರೆದಿರುವ ಪತ್ರಕ್ಕೆ ಸಹಿ ಹಾಕಿರುವ ಇತರರಿಗೂ ಈ ಬಗ್ಗೆ ತಿಳಿಸಿದ್ದೇನೆ. ಆ ನಂಬರ್ ನ್ನು ಪಾವರ್ಡ್ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಚಲನಚಿತ್ರ ನಟರು, ನಿರ್ಮಾಪಕರು, ಲೇಖಕರು, ಸೇರಿದಂತೆ 49 ವಿವಿಧ ಕ್ಷೇತ್ರಗಳ ಗಣ್ಯರು, ರಾಮನ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಗುಂಪು ಗಲಭೆ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದರು. 

ಜೈ ಶ್ರೀ ರಾಮ್ ಹೆಸರಿನಲ್ಲಿ ನಡೆಯುತ್ತಿರುವ ಗುಂಪು ಗಲಭೆಗಳು ಕಾನೂನು ಸುವ್ಯವಸ್ಥೆಗೆ ಮಾರಕವಾಗಿದ್ದು, ಇಂತಹ ಘಟನೆಗಳ ಬಗ್ಗೆ ವಿಷಾಧ ಇರುವುದಾಗಿ ಕೌಶಿಕ್ ಸೇನ್ ಹೇಳಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp