ಸಿಲಿಕಾನ್ ಸಿಟಿ ರಸ್ತೆ ದುರವಸ್ಥೆ: ಅಧಿಕಾರಿಗಳೇ ಎದ್ದೇಳಿ ಎಂದ ಪ್ರಿಯಾ ಸುದೀಪ್

ಸಿಲಿಕಾನ್ ಸಿಟಿ ಬೆಂಗಳುರಿನ ರಸ್ತೆಗಳು ಅದೆಷ್ಟು ಹದಗೆಟ್ಟಿದೆ ಎಂದರೆ ಕೆರೆಯಂತಾಗಿರುವ ಕೆಲ ರಸ್ತೆಗಳು ದ್ವಿಚಕ್ರ ವಾಹನ ಸವಾರರ ಪಾಲಿಗೆ ಯಮದೂತರಂತೆ ಆಗಿದೆ

Published: 25th July 2019 12:00 PM  |   Last Updated: 25th July 2019 01:16 AM   |  A+A-


Priya Sudeep

ಪ್ರಿಯಾ ಸುದೀಪ್

Posted By : RHN
Source : Online Desk
ಸಿಲಿಕಾನ್ ಸಿಟಿ ಬೆಂಗಳುರಿನ ರಸ್ತೆಗಳು ಅದೆಷ್ಟು ಹದಗೆಟ್ಟಿದೆ ಎಂದರೆ ಕೆರೆಯಂತಾಗಿರುವ ಕೆಲ ರಸ್ತೆಗಳು ದ್ವಿಚಕ್ರ ವಾಹನ ಸವಾರರ ಪಾಲಿಗೆ ಯಮದೂತರಂತೆ ಆಗಿದೆ

ಈ ಬಗೆಗೆ ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ  ಆಕ್ರೋಶ ವ್ಯಕ್ತಪಡಿಸುತ್ತಿರುವುದು ಹಳೆ ಸುದ್ದಿ ಇದೀಗ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ಪಾಲಿನ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ತಾವು ಸಹ ರಸ್ತೆ ಸುರಕ್ಷತೆ ಬಗೆಗೆ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಲ ದಿನಗಳ ಹಿಂದೆ #SaveBellandur ಪೇಜಿನಲ್ಲಿ ಹಾಳಾಗಿರುವ ರಸ್ತೆ ಫೋಟೋಗಳನ್ನು ಅಪ್ ಮಾಡಲಾಗಿದ್ದು ಪ್ರಿಯಾ ಅವರು ಅದೇ ಫೋಟೋ ರಿಟ್ವಿಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

"ನಾನು ಸಹ ಇದೇ ಮಾರ್ಗದಲ್ಲಿ ಸಂಚರಿಸುವವಳು, ಇಲ್ಲಿನ ಸ್ಥಳೀಯ ಜನರ ಆಕ್ರೋಶ ನನಗೆ ಅರ್ಥವಾಗುತ್ತದೆ. ಆದರೆ ಅಧಿಕಾರಿಗಳಿಗೆ ತಮ್ಮ ಕರ್ತವ್ಯದ ಅರಿವಿಲ್ಲ. ಇನ್ನಾದರೂ ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಿ" ಪ್ರಿಯಾ ಸುದೀಪ್ ಆಗ್ರಹಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp