ಕೆಜಿಎಫ್ 2 ಲೇಟೆಸ್ಟ್ ಅಪ್‌ಡೇಟ್ ಬಹಿರಂಗ: ಅಧೀರ ಫಸ್ಟ್ ಲುಕ್, ಸಂಜಯ್ ದತ್ ಆಗ್ತಾರಾ?

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಕೆಜಿಎಫ್ 2ಗಾಗಿ ದೇಶವೇ...
ಯಶ್-ಸಂಜಯ್ ದತ್
ಯಶ್-ಸಂಜಯ್ ದತ್
2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಕೆಜಿಎಫ್ 2ಗಾಗಿ ದೇಶವೇ ಎದುರು ನೋಡುತ್ತಿದೆ. ಈ ಚಿತ್ರದಲ್ಲಿ ಅಧೀರ ಪಾತ್ರ ಎಲ್ಲರ ಕೇಂದ್ರ ಬಿಂದುವಾಗಿದ್ದು ಫಸ್ಟ್ ಲುಕ್ ರಿಲೀಸ್ ಆಗಿದೆ. 
ಕೆಜಿಎಫ್ 2 ಚಿತ್ರತಂಡ ನಿನ್ನೆಯಷ್ಟೇ ಟ್ವೀಟ್ ಮಾಡಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಹೊಸ ಅಪ್ ಡೇಟ್ ಕೊಡುವುದಾಗಿ ಹೇಳಿತ್ತು. ಅದರಂತೆ ಇಂದು ಅಧೀರ ಪಾತ್ರಧಾರಿಯ ಫಸ್ಟ್ ಲುಕ್ ಬಹಿರಂಗ ಮಾಡಿದೆ. 
ಕೆಜಿಎಫ್ ಚಾಪ್ಟರ್ 1ನಲ್ಲಿ ಅಧೀರ ಪಾತ್ರವನ್ನು ಸೃಷ್ಟಿಸಲಾಗಿತ್ತು. ಹೆಸರನ್ನು ಬಿಟ್ಟರೇ ಅಧೀರನ ಗುರುತಿಸುವಿಕೆಗಾಗಿ ಬಲಗೈನ ಬೆರಳಿನಲ್ಲಿ ಸಿಂಹ ಮುಖದ ಉಂಗುರವನ್ನು ತೋರಿಸಲಾಗುತ್ತಿತ್ತು. ಇದೀಗ ಫಸ್ಟ್ ಲುಕ್ ನಲ್ಲೂ ವ್ಯಕ್ತಿಯೊಬ್ಬ ಹಿಂದೆ ಕೈ ಕಟ್ಟಿ ನಿಂತಿದ್ದಾರೆ. 
ಇನ್ನು ಜುಲೈ 29ರಂದು ಬೆಳಗ್ಗೆ 10 ಗಂಟೆಗೆ ಅಧೀರ ಪಾತ್ರಧಾರಿಯ ಹೆಸರನ್ನು ಬಹಿರಂಗಪಡಿಸಲಿದೆ. ಈ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಲಿದ್ದಾರೆ ಎಂಬ ವಿಚಾರ ಗಾಂಧಿನಗರದಲ್ಲಿ ಹರಿದಾಡಿತ್ತು. ಆದರೆ ಇಲ್ಲಿಯವರೆಗೂ ಚಿತ್ರ ತಂಡ ಮಾತ್ರ ಎಲ್ಲೂ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ಜುಲೈ 29ರಂದು ಎಲ್ಲಾ ಕುತೂಹಲಗಳಿಗೂ ತೆರೆ ಬೀಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com