'ರಾಮನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಡು ಹಾಡಂಗಿಲ್ಲ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಗಳಿಗೆ ಒಂದು ಬ್ಯಾಡ್ ನ್ಯೂಸ್, ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ದರ್ಶನ್ ...

Published: 27th July 2019 12:00 PM  |   Last Updated: 27th July 2019 02:01 AM   |  A+A-


Darshan

ದರ್ಶನ್

Posted By : SD SD
Source : Online Desk
ರಾಮನಗರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಗಳಿಗೆ ಒಂದು ಬ್ಯಾಡ್ ನ್ಯೂಸ್, ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ  ನಟ ದರ್ಶನ್ ಹಾಡುಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ದರ್ಶನ್ ಹಾಡುಗಳನ್ನು ಬ್ಯಾನ್ ಮಾಡುವ ಮೂಲದ ಮಂಡ್ಯದಲ್ಲಿ ನಿಖಿಲ್ ಸೋಲಿಗೆ ರಾಮನಗರದಲ್ಲಿ ಸೇಡು ತೀರಿಸಿಕೊಳ್ಳುತ್ತಿದ್ದಾರಾ  ಎಂಬ ಅನುಮಾನವೊಂದು ಇದೀಗ ಕಾಡುತ್ತಿದೆ.

ರಾಮನಗರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದರ್ಶನ್ ಸಿನಿಮಾದ ಹಾಡು ಹಾಡೋಕೆ ಮುಂದಾದರೂ ಆಯೋಜಕರು ಬಿಟ್ಟಿಲ್ಲ. ಯಾವುದೇ ಕಾರಣಕ್ಕೂ ದರ್ಶನ್ ಸಿನಿಮಾದ ಹಾಡನ್ನು ಹಾಡಲೇಬಾರದು ಎಂದು ಕಾರ್ಯಕ್ರಮದ ಆಯೋಜಕರು ಫರ್ಮಾನು ಹೊರಡಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದರ್ಶನ್ ಸಿನಿಮಾದ ಹಾಡುಗಳು ಯಾಕೆ ಬೇಡವೆಂದು ಹೇಳಿರುವುದರ ಬಗ್ಗೆ ಆಯೋಜಕರು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮಂಡ್ಯ ಚುನಾವಣೆಯ ಎಫೆಕ್ಟ್ ನಿಂದಾಗಿಯೇ ರಾಮನಗರದಲ್ಲಿ ದರ್ಶನ್ ಸಿನಿಮಾದ ಹಾಡುಗಳನ್ನು ಬ್ಯಾನ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp