ತುಳುವಿನ 'ಚಾಲಿ ಪೋಲಿಲು' ನಿರ್ದೇಶಕರಿಂದ ಕನ್ನಡದಲ್ಲಿ 'ಸವರ್ಣದೀರ್ಘ ಸಂಧಿ' ಪಾಠ!

ಬಾಕ್ಸ್ ಆಪೀಸ್ ನಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ್ದ ತುಳು ಚಿತ್ರ "ಚಾಲಿ ಪೋಲಿಲು" ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವೀರೇಂದ್ರ ಶೆಟ್ಟಿ ....
ತುಳುವಿನ 'ಚಾಲಿ ಪೋಲಿಲು' ನಿರ್ದೇಶಕರಿಂದ ಕನ್ನಡದಲ್ಲಿ 'ಸವರ್ಣದೀರ್ಘಸಂಧಿ' ಪಾಠ!
ತುಳುವಿನ 'ಚಾಲಿ ಪೋಲಿಲು' ನಿರ್ದೇಶಕರಿಂದ ಕನ್ನಡದಲ್ಲಿ 'ಸವರ್ಣದೀರ್ಘಸಂಧಿ' ಪಾಠ!
ಬಾಕ್ಸ್ ಆಪೀಸ್ ನಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ್ದ ತುಳು ಚಿತ್ರ "ಚಾಲಿ ಪೋಲಿಲು"  ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ  ವೀರೇಂದ್ರ ಶೆಟ್ಟಿ ಕನ್ನಡ ಚಿತ್ರರಂಗ ಪ್ರವೇಶಕ್ಕೆ ಸಿದ್ದವಾಗಿದ್ದಾರೆ. ತಾವೇ ನಿರ್ದೇಶಿಸಿ ಅಭಿನಯಿಸಲಿರುವ ಈ ಚಿತ್ರಕ್ಕೆ "ಸವರ್ಣದೀರ್ಘ ಸಂಧಿ" ಎಂದು ನಾಮಕರಣ ಮಾಡಲಾಗಿದೆ.
ಇದೊಂದು ಗ್ಯಾಂಗ್ ಸ್ಟರ್ ಗಳ ಕಾಮಿಡಿ ಚಿತ್ರವಾಗಿರಲಿದ್ದು "ಇದೊಂದು ರೌಡಿಸಂ ಚಿತ್ರವಾಗಿದ್ದರೂ ಇದರಲ್ಲಿ ಹಾಸ್ಯವು ಪ್ರಧಾನವಗಿರಲಿದೆ ಹೊರತು ಮಚ್ಚು, ಲಾಂಗುಗಳ ಅಬ್ಬರವಲ್ಲ"
ನಾಯಕನಿಗೆ ಯಾವುದೇ ಶೈಕ್ಷಣಿಕ ಹಿನ್ನೆಲೆ ಇಲ್ಲ, ಆದರೆ ಕನ್ನಡ ವ್ಯಾಕರಣದ ವಿಲಕ್ಷಣ ನಿಯಮಗಳನ್ನೆಲ್ಲಾ ಅವನು ಬಲ್ಲವನಾಗಿರುತ್ತಾನೆ. ಹಾಗೆಯೇ ಅತೈದನ್ನೇ ತನ್ನ ಆಯುಧವನ್ನಾಗಿ ಸಹ ಮಾಡಿಕೊಳ್ಳುತ್ತಾನೆ ಎಂದು ನಿರ್ದೇಶಕ ಶೆಟ್ಟಿ ಹೇಳಿದ್ದಾರೆ. 
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ ಶೆಟ್ಟಿ , ಶೀಘ್ರದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿಗೆ ಚಿತ್ರವನ್ನು ಕಳಿಸಲಾಗುತ್ತದೆ ಎಂದರು.
ಚಿತ್ರದಲ್ಲಿ  ರವಿ ಭಟ್ (ವಿನಯಾ ಪ್ರಸಾದ್ ಅವರ ಸೋದರ) ಅವರ ಪುತ್ರಿ ಕೃಷ್ಣಾ ಅವರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಲಾಗುತ್ತಿದೆ.ಇದಲ್ಲದೆ ಈ ಚಿತ್ರದಲ್ಲಿ ನಟ ನಟಿಯರಾದ ಪದ್ಮಜ ರಾವ್, ಕೃಷ್ಣ ನಾಡಿಗ್, ನಿರಂಜನ್ ದೇಶಪಾಂಡೆ ಮತ್ತು ರವಿ ಮಂಡ್ಯ ಅಭಿನಯಿಸಿದ್ದಾರೆ.ವೀರು ಟಾಕೀಸ್ ಮತ್ತು ಲಿಲಾಕ್ ಎಂಟರ್‌ಟೈನ್‌ಮೆಂಟ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ  ಚಿತ್ರಕ್ಕೆ ಮನೋ ಮೂರ್ತಿ ಸಂಗೀತ ನೀಡಲಿದ್ದು, ಲೋಗಂತನ್ ಶ್ರೀನಿವಾಸನ್ ಕ್ಯಾಮೆರಾ ಕೆಲಸವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com