ನಟಿ ಅನುಷ್ಕಾ ಶೆಟ್ಟಿ ಟ್ವೀಟ್ ನೋಡಿ ರಶ್ಮಿಕಾ ಮಂದಣ್ಣ ವಿರುದ್ಧ ಮುಗಿಬಿದ್ದ ನೆಟಿಗರು!

ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಬರಲ್ಲ ಅಂತ ಹೇಳಿ ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ನಟಿ ಅನುಷ್ಕಾ ಶೆಟ್ಟಿ ತಾಯಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಮಾಡಿರುವ...
ಅನುಷ್ಕಾ ಶೆಟ್ಟಿ-ರಶ್ಮಿಕಾ ಮಂದಣ್ಣ
ಅನುಷ್ಕಾ ಶೆಟ್ಟಿ-ರಶ್ಮಿಕಾ ಮಂದಣ್ಣ
ಬೆಂಗಳೂರು: ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಬರಲ್ಲ ಅಂತ ಹೇಳಿ ನೆಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ನಟಿ ಅನುಷ್ಕಾ ಶೆಟ್ಟಿ ತಾಯಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಮಾಡಿರುವ ಟ್ವೀಟ್ ನೋಡಿದ ಟ್ವೀಟರಿಗರು ಮತ್ತೆ ರಶ್ಮಿಕಾ ವಿರುದ್ಧ ಮುಗಿಬಿದ್ದಿದ್ದಾರೆ.
ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ ಸದ್ಯ ಟಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಸ್ಟಾರ್ ನಟಿಯಾಗಿದ್ದರು ಸಹ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ ಹೇಳಿ ಟ್ವೀಟ್ ಮಾಡಿದ್ದು ಇದು ಕೋಟ್ಯಂತರ ಕನ್ನಡಿಗರ ಮನಸ್ಸನ್ನು ಗೆದ್ದಿದೆ. 
ಇನ್ನು ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿದ್ದು ಒಂದೆರೆಡು ಚಿತ್ರಗಳು ಹಿಟ್ ಆಗುತ್ತಿದ್ದಂತೆ ಕನ್ನಡ ಪ್ರೇಮ ಮರೆತು ನನಗೆ ಕನ್ನಡ ಬರಲ್ಲ. ಕನ್ನಡ ಮಾತನಾಡುವುದು ತುಂಬಾ ಕಷ್ಟ ಎಂದು ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. 
ಈಗ ಅನುಷ್ಕಾ ಶೆಟ್ಟಿ ಕನ್ನಡದ ಟ್ವೀಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನುಷ್ಕಾ ನಿಮಗೆ ತುಂಬು ಹೃದಯದ ಗೌರವ ಸಲ್ಲಿಸುತ್ತೇವೆ. ಪರಭಾಷೆಯಲ್ಲಿ ಖ್ಯಾತಿ ಗಳಿಸಿದ ಕೆಲವರು ನನಗೆ ಕನ್ನಡ ಬರಲ್ಲ. ಕನ್ನಡ ಮಾತನಾಡುವುದು ಕಷ್ಟ ಎಂದು ಹೇಳುವವರ ನಡುವೆ ನೀವು ಅತಿ ಅಪರೂಪ ಎಂದು ಹೇಳಿ ಟ್ವೀಟ್ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com