ಸೂಟು ಬೂಟ್ ನಲ್ಲಿ ಗಡ್ಡ ಬಿಟ್ಟಿರುವ ರಾಖಿ ಭಾಯ್ ಯಶ್ ಪೋಟೋ ವೈರಲ್!

ರಾಖಿ ಭಾಯ್ ಸೂಟ್ ಬೂಟ್ ಹಾಕಿಕೊಂಡು ಗಡ್ಡ ಬಿಟ್ಟಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ ರಾಕಿಂಗ್ ಸ್ಟಾರ್ ಯಶ್ ಅಭಿಯನದ ಕೆಜಿಎಫ್ -ಚಾಪ್ಟರ್ 1 ಬಾಕ್ಸ್ ಆಫೀಸ್ ನಲ್ಲಿ ಸುಮಾರು 250 ಕೋಟಿ ರೂಪಾಯಿ ಕೊಳ್ಳೆ ಹೊಡೆಯುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು.

ಈಗ ಅದರ ಮುಂದುವರೆದ ಭಾಗದ ಕೆಜಿಎಫ್ - ಚಾಪ್ಟರ್ 2 ಶೂಟಿಂಗ್ ಭರದಿಂದ ಸಾಗಿದ್ದು, ಈ ಸಿನಿಮಾದ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಚಾಪ್ಟರ್ 2  ಸಿನಿಮಾಗೂ ನಿರ್ಮಾಪಕ ವಿಜಯ್ ಕಿರಗಂದೂರು  ಸಾಕಷ್ಟು ಖರ್ಚು ಮಾಡುತ್ತಿದ್ದು, ಈಗಾಗಲೇ 100  ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

 ಸದ್ಯ ಕೆಜಿಎಫ್ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಆ ಬಳಿಕ ಮೈಸೂರು ಹಾಗೂ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದೆಯಂತೆ . ಈ ಮಧ್ಯೆ ರಾಖಿ ಭಾಯ್ ಸೂಟ್ ಬೂಟ್ ಹಾಕಿಕೊಂಡು ಗಡ್ಡ ಬಿಟ್ಟಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗರುಡನನ್ನು ರಾಖಿ ಭಾಯ್ ಮುಗಿಸಿದ ನಂತರ ಏನೆಲ್ಲಾ ಘಟನೆಗಳು ಕೆಜಿಎಫ್ ನಲ್ಲಿ ನಡೆಯಲಿವೆ  ಎಂಬ ಕುತೂಹಲ ಇದ್ದೇ ಇದೆ. ಈಗ ವೈರಲ್ ಆಗಿರುವ  ಸೂಟ್ ಬೂಟಿನ ರಾಖಿ ಭಾಯ್ ಪೋಟೋ ಕೂಡಾ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com