ರಾಬರ್ಟ್ ಸಿನಿಮಾ ತಂಡದಿಂದ ವೀಕ್ಷಕರಿಗೆ ರಂಜಾನ್ ಗಿಫ್ಟ್!

ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಚಿತ್ರತಂಡ ರಂಜಾನ್ ಪ್ರಯುಕ್ತ ವಿಶೇಷ ಉಡುಗೊರೆ ನೀಡುತ್ತಿದೆ...
ರಾಬರ್ಟ್ ಸಿನಿಮಾ ಪೋಸ್ಟರ್
ರಾಬರ್ಟ್ ಸಿನಿಮಾ ಪೋಸ್ಟರ್
ದರ್ಶನ್ ಅಭಿಮಾನಿಗಳಿಗೆ ರಾಬರ್ಟ್ ಚಿತ್ರತಂಡ ರಂಜಾನ್ ಪ್ರಯುಕ್ತ ವಿಶೇಷ ಉಡುಗೊರೆ ನೀಡುತ್ತಿದೆ.  ವೀಕ್ಷಕರನ್ನು ಸೆಳೆಯಲು ನಿರ್ದೇಶಕ ತರುಣ್ ಸುಧೀರ್ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ.
ಜೂನ್ 5 ರಂದು ರಾಬರ್ಟ್ ಸಿನಿಮಾದ ಥೀಮ್ ಪೋಸ್ಟರ್ ರಿಲೀಸ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ,  ಪೋಸ್ಟರ್ ನಲ್ಲಿ ದರ್ಶನ್ ಪಾತ್ರ ಏನು ಹೇಗಿರುತ್ತದೆ ಎಂಬುದನ್ನು ರಿವೀಲ್ ಮಾಡಲಾಗುವುದಿಲ್ಲವಂತೆ,
ಹಂತಹಂತವಾಗಿ ಪ್ರೇಕ್ಷಕರು ಮನ ಮುಟ್ಟಲು ತರುಣ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾ ಹೇಳಲು ಹೊರಟಿರುವ ಶೈಲಿ ಅರ್ಥ ಮಾಡಿಸುವ ಪ್ರಯತ್ನ ಇದಾಗಿದೆ. 
ಇನ್ನೂ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿ ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ, ಈ ಹಿಂದೆ ನಟಿಸಿದ್ದ ನಾಯಕಿಯರಿಗೆ ಮಣೆ ಹಾಕದೇ ಹೊಸ ಮುಖ ತರಲು ತರುಣ್ ಪ್ರಯತ್ನಿಸುತ್ತಿದ್ದಾರೆ ಹೀಗಾಗಿ ಹೆಚ್ಚಿನ ಸಮಯ ಹಿಡಿಯುತ್ತಿದೆ, ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com