'ಪೈಲ್ವಾನ್ ' ಚಿತ್ರದ ಬಾಕ್ಸಿಂಗ್ ಪೋಸ್ಟರ್ ಬಿಡುಗಡೆ, ವೈರಲ್

ಕೃಷ್ಣ ನಿರ್ದೇಶನದ ನಟ ಸುದೀಪ್ ನಟನೆಯ ಬಹು ನಿರೀಕ್ಷಿತ 'ಪೈಲ್ವಾನ್ ' ಚಿತ್ರದ ಮೊಟ್ಟ ಮೊದಲ ಬಾಕ್ಸಿಂಗ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ

Published: 04th June 2019 12:00 PM  |   Last Updated: 04th June 2019 05:35 AM   |  A+A-


New Poster

ಹೊಸ ಪೋಸ್ಟರ್

Posted By : ABN ABN
Source : Online Desk
ಬೆಂಗಳೂರು: ಕೃಷ್ಣ ನಿರ್ದೇಶನದ ನಟ ಸುದೀಪ್ ನಟನೆಯ ಬಹು ನಿರೀಕ್ಷಿತ  'ಪೈಲ್ವಾನ್ ' ಚಿತ್ರದ  ಮೊಟ್ಟ ಮೊದಲ ಬಾಕ್ಸಿಂಗ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ. ಸಿಕ್ಸ್ ಪ್ಯಾಕ್ ನಲ್ಲಿ  ರಿಂಗ್ ನಲ್ಲಿರುವ ಕುಸ್ತಿಪಟು ಸುದೀಪ್ ಅವರ ಪೋಟೋ ಕಂಡು ಅವರ ಅಭಿಮಾನಿಗಳು ಪಿಧಾ ಆಗಿದ್ದಾರೆ.

ಚಿತ್ರೀಕರಣದ ಆರಂಭದಿಂದಲೂ ಸಾಕಷ್ಟು ಸುದ್ದಿ ಮಾಡುತ್ತಿದ್ದ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ನ ಸುನೀಲ್ ಶೆಟ್ಟಿ,  ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್ ಸಿಂಗ್  ಮತ್ತಿತರ ತಾರಾಗಣವಿದ್ದು, ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಆಗಸ್ಟ್  8 ರಂದು ಚಿತ್ರ ಎಂಟು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಸುದೀಪ್ ಅವರ ಪೋಟೋ ಟ್ವೀಟರ್ ನಲ್ಲಿ ಬಿಡುಗಡೆಯಾಗುತ್ತಿದ್ದಂತೆ ವೈರಲ್ ಆಗಿದ್ದು, ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜಾ, ಬಾಲಿವುಡ್ ನ ಸುನೀಲ್ ಶೆಟ್ಟಿ, ತಮಿಳಿನ ವಿಜಯ್ ಸೇತುಪತಿ, ಮಳಯಾಳಂನ ಮೋಹನ್ ಲಾಲ್ ಮತ್ತಿತರ ನಟರು ಶ್ಲಾಘನೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.

To all those who believe in me n to all those whom I believe in,,,many Thanks, Huggs n cheers for inspiring me...
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp