ಪಿಸಿ ಶೇಖರ್ ಚಿತ್ರದಲ್ಲಿ 'ಗ್ಯಾಂಗ್‌ಸ್ಟರ್‌' ಆಗಿ ಮಿಂಚಲಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್

ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ತಮ್ಮ ಮುಂದಿನ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಪಿಸಿ ಶೇಖರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜುಲೈ 6ರಿಂದ ಪ್ರಾರಂಭವಾಗಲಿದೆ.

Published: 05th June 2019 12:00 PM  |   Last Updated: 05th June 2019 11:39 AM   |  A+A-


Prajwal Devaraj

ಪ್ರಜ್ವಲ್ ದೇವರಾಜ್

Posted By : RHN RHN
Source : The New Indian Express
ಡೈನಾಮಿಕ್ ಹೀರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ತಮ್ಮ ಮುಂದಿನ ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಪಿಸಿ ಶೇಖರ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜುಲೈ 6ರಿಂದ ಪ್ರಾರಂಭವಾಗಲಿದೆ. ವಿಶೇಷವೆಂದರೆ ನಟ ಪ್ರಜ್ವಲ್ ಇದಕ್ಕೆ ಕೇವಲ ಎರಡು ದಿನಗಳ ಮುನ್ನ (ಜುಲೈ 4) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

ಇನ್ನು ನಿರ್ದೇಶಕ ಶೇಖರ್ ಹಾಗೂ ಪ್ರಜ್ವಲ್ ಜೋಡಿಗೆ ಇದು ಎರಡನೇ ಚಿತ್ರವಾಗಿದೆ. ಇದಕ್ಕೆ ಮುನ್ನ ಈ ಜೋಡಿ "ಅರ್ಜುನ" ಚಿತ್ರದ ಮೂಲಕ ಒಂದಾಗಿತ್ತು."ಇದೊಂದು ಪೂರ್ಣ ಪ್ರಮಾಣದ ಗ್ಯಾಂಗ್ ಸ್ಟರ್ ಚಿತ್ರವಾಗಿರಲಿದೆ, ಮಾಫಿಯಾ ಲೋಕದ ಅನಾವರಣಗೊಳಿಸುವ ಈ ಚಿತ್ರ ರಕ್ತಪಾತದಂತಹಾ ದೃಷ್ಯಗಳ ವೈಭವೀಕರಣವಿಲ್ಲದಿದ್ದರೂ ಸಹ ಬಹಳಷ್ಟು ಗಂಭೀರ ಕಥಾನಕವನ್ನು ಹೊಂದಿರಲಿದೆ." ನಿರ್ದೇಶಕರು ಹೇಳಿದ್ದಾರೆ.

ಇನ್ನು ಪ್ರಜ್ವಲ್ ಈ ಚಿತ್ರದಲ್ಲಿ ಮೂರು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದಿರುವ ನಿರ್ದೇಶಕ ಇದಕ್ಕಾಗಿ ತಯಾರಿ ಸಹ ಈಗಲೇ ಪ್ರಾರಂಭವಾಗಿದೆ ಎಂದಿದ್ದಾರೆ.

ಚಂದನ್ ಗೌಡ ಅವರ "ಚಂದನವನ ಸಿಸಿ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರ ತಯಾರಾಗಲಿದೆ.ಇನ್ನು ನಿರ್ದೇಶಕರು ಈ ಚಿತ್ರವನ್ನು ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಸಹ ತೆರೆಗೆ ತರಲು ಯೋಜಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp