ರಂಜಾನ್‌ಗೆ ಡಿ ಬಾಸ್ ಅಭಿಮಾನಿಗಳಿಗೆ ವಿಶೇಷ ಗಿಫ್ಟ್! 'ರಾಬರ್ಟ್' ಥೀಮ್ ಪೋಸ್ಟರ್ ರಿಲೀಸ್

ಅಭಿಮಾನಿಗಳ ಪಾಲಿನ "ಡಿ ಬಾಸ್" ದರ್ಶನ್ ತೂಗುದೀಪ್ ತಮ್ಮ ಮಾತಿನಂತೆ ರಂಜಾನ್‌ಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.
ರಾಬರ್ಟ್’ಥೀಮ್ ಪೋಸ್ಟರ್
ರಾಬರ್ಟ್’ಥೀಮ್ ಪೋಸ್ಟರ್
ಅಭಿಮಾನಿಗಳ ಪಾಲಿನ "ಡಿ ಬಾಸ್" ದರ್ಶನ್ ತೂಗುದೀಪ್ ತಮ್ಮ ಮಾತಿನಂತೆ ರಂಜಾನ್‌ಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ. ತಮ್ಮ ಮುಂದಿನ ಚಿತ್ರ ‘ರಾಬರ್ಟ್’ ಥೀಮ್ ಪೋಸ್ಟರ್ ಬಿಡುಗಡೆಗೊಳಿಸಿದ ನಟ ಅದನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ" ಎಂದು ಬರೆದುಕೊಂಡಿರುವ ದರ್ಶನ್ "ರಬರ್ಟ್" ಚುತ್ರದ ಪೋಸ್ಟರ್ ಹಾಕಿಒಕೊಂಡಿದ್ದಾರೆ.
ಚಿತ್ರದಲ್ಲಿ ದೈತ್ಯ ಬೈಕನ್ನೇರಿ ಕುಳಿತ ದರ್ಶನ್ ವಿಭಿನ್ನ ಕೋಟ್ ತೊಟ್ಟಿದ್ದಾರೆ. ಅವರೆದುರು ಸಾಲುಗಟ್ಟಿ ನಿಂತಿರುವ ವಾಹನಗಳನ್ನು ಕಾಣಬಹುದಾಗಿದೆ. ಆದ್ರೆ ಪೋಸ್ಟರ್ ನಲ್ಲಿ ದರ್ಶನ್ ಮುಖ ಮಾತ್ರ ಕಾನದಿರುವುದಕ್ಕೆ ಅಭಿಮಾನಿಗಳಿಗೆ ತುಸು ನಿರಾಶೆಯಾಗಿದೆ.

ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. @UmapathyFilms ಬ್ಯಾನರ್ ಅಡಿಯಲ್ಲಿ, @TharunSudhir ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. @umap30071#RoberrtThemePoster #Roberrt pic.twitter.com/qy3tzZubPt

— Darshan Thoogudeepa (@dasadarshan) June 5, 2019
ಚಿತ್ರವನ್ನು "ಚೌಕ" ಖ್ಯಾತಿಯ ತರುಣ್ ಸುದೀರ್ ನಿರ್ದೇಶಿಸುತ್ತಿದ್ದರೆ ಉಮಾಪತಿ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com