ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ; ಸೋಷಿಯಲ್ ಮೀಡಿಯಾಗೆ ಪುನರಾಗಮನ

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಗುರುವಾರ(ಜೂನ್ 6)36ನೇ ಹುಟ್ಟುಹಬ್ಬದ ಸಂಭ್ರಮ. ಕಿರಿಕ್ ಪಾರ್ಟಿ ಚಿತ್ರದ ಬಳಿಕ ...

Published: 06th June 2019 12:00 PM  |   Last Updated: 06th June 2019 01:47 AM   |  A+A-


Rakshit Shetty

ರಕ್ಷಿತ್ ಶೆಟ್ಟಿ

Posted By : SUD SUD
Source : Online Desk
ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಗುರುವಾರ(ಜೂನ್ 6)36ನೇ ಹುಟ್ಟುಹಬ್ಬದ ಸಂಭ್ರಮ. ಕಿರಿಕ್ ಪಾರ್ಟಿ ಚಿತ್ರದ ಬಳಿಕ ಅವರು ತೆರೆ ಮೇಲೆ ಬಂದಿರಲಿಲ್ಲ. ಇದೀಗ ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ನಾಯಕನಟನಾಗಿ ತೆರೆಯ ಮೇಲೆ ಅವರ ಅಭಿಮಾನಿಗಳು ನೋಡುವ ಸಮಯ ಸನ್ನಿಹಿತವಾಗಿದೆ.

ಇಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಅವನೇ ಶ್ರೀಮನ್ನಾರಾಯಣ ಚಿತ್ರದ ವಿಶೇಷ ಪೋಸ್ಟರ್, ಎರಡನೇ ಟೀಸರ್ ಬಿಡುಗಡೆಯಾಗುತ್ತಿದೆ.

ರಕ್ಷಿತ್ ಶೆಟ್ಟಿ ಮುಂದಿನ ಚಿತ್ರ ಅವನೇ ಶ್ರೀಮನ್ನಾರಾಯಣ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗುತ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಇದರ ಜೊತೆ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದ ರಕ್ಷಿತ್ ಶೆಟ್ಟಿ ಇಂದು ಮತ್ತೆ ವಾಪಸ್ಸಾಗಿದ್ದಾರೆ.ಆದರೆ ಖುದ್ದು ರಕ್ಷಿತ್ ಶೆಟ್ಟಿಯವರೇ ಸೋಷಿಯಲ್ ಮೀಡಿಯಾ ಖಾತೆಯನ್ನು ನಿರ್ವಹಿಸುತ್ತಿಲ್ಲ. ಇದಕ್ಕಾಗಿ ಅವರ ಡಿಜಿಟಲ್ ತಂಡವಿದೆ. ತಮ್ಮ ಡಿಜಿಟಲ್ ಟೀಮ್ ಮೂಲಕ ರಕ್ಷಿತ್ ಶೆಟ್ಟಿಯವರು ತಮ್ಮ ಮುಂಬರುವ ಚಿತ್ರಗಳು, ಅವರ ಕೆಲವು ಅನಿಸಿಕೆಗಳು, ಅಭಿಪ್ರಾಯಗಳನ್ನು ಕಾಲಕಾಲಕ್ಕೆ ಅಪ್ ಡೇಟ್ ಮಾಡುತ್ತಾ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲಿದ್ದಾರೆ.

ಸೋಷಿಯಲ್ ಮೀಡಿಯಾದಿಂದ ದೂರವಿದ್ದ ರಕ್ಷಿತ್ ಶೆಟ್ಟಿ: ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದ ನಟ ರಕ್ಷಿತ್ ಶೆಟ್ಟಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅವುಗಳಿಂದ ಹೊರಬಂದಿದ್ದರು. ಆಗ ಸಹಜವಾಗಿ ಅವರ ಅಭಿಮಾನಿಗಳಲ್ಲಿ ಬೇಸರ ಮತ್ತು ಅನುಮಾನುಗಳು ಮೂಡಿದ್ದವು.
ಸೋಷಿಯಲ್ ಮೀಡಿಯಾದಿಂದ ನನ್ನ ಅಭಿಮಾನಿ ಬಳಗ ಹೆಚ್ಚಾಗಿತ್ತು. ಆದರೆ ಕೊನೆ ಕೊನೆಗೆ ಅದು ನನ್ನ ದಿನನಿತ್ಯದ ಬದುಕು ಮತ್ತು ಕೆಲಸದ ಮೇಲೆ ಪರಿಣಾಮ ಬೀರಿ ಅದರಿಂದ ಹೊರಬರಲು ನಿರ್ಧರಿಸಿದೆ. ಸೋಷಿಯಲ್ ಮೀಡಿಯಾದಿಂದ ಹೊರಬಂದು ಆರು ತಿಂಗಳ ಮೇಲಾದವು, ನನಗೆ ಯಾವುದೇ ವಿಷಾದವಿಲ್ಲ. ನನ್ನ ಕೆಲಸದ ಗುಣಮಟ್ಟ ಹೆಚ್ಚಾಗಿದೆ, ನನ್ನ ಜೀವನವನ್ನು ನಾನು ಈ ರೀತಿ ಇಷ್ಟಪಡುತ್ತೇನೆ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp