ಖ್ಯಾತ ನಟಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮೆಟ್ರೋ ಸ್ಲ್ಯಾಬ್, ತಪ್ಪಿದ ಅನಾಹುತ

ಖ್ಯಾತ ನಟಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ರೈಲು ಕಾಮಗಾರಿಯ ಸ್ಲ್ಯಾಬ್ ಕುಸಿದು ಬಿದ್ದು ಅವಘಡ ಸಂಭವಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

Published: 08th June 2019 12:00 PM  |   Last Updated: 08th June 2019 12:44 PM   |  A+A-


Concrete from Metro pillar falls on actress Archana Kavi’s car

ಖ್ಯಾತ ನಟಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮೆಟ್ರೋ ಸ್ಲ್ಯಾಬ್, ತಪ್ಪಿದ ಅನಾಹುತ

Posted By : RHN RHN
Source : The New Indian Express
ತಿರುವನಂತಪುರಂ: ಖ್ಯಾತ ನಟಿಯೊಬ್ಬರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ರೈಲು ಕಾಮಗಾರಿಯ ಸ್ಲ್ಯಾಬ್ ಕುಸಿದು ಬಿದ್ದು ಅವಘಡ ಸಂಭವಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಅದೃಷ್ಟವಶಾತ್ ನಟಿಯು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಮಲಯಾಳಂ ಚಿತ್ರರಂಗದ ಖ್ಯಾತ ನಟಿ  ಅರ್ಚನಾ ಕವಿ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಸ್ಲ್ಯಾಬ್ ಕುಸಿದಿದೆ. ಈ ಸಂಬಂಧ ಟ್ವೀಟ್ ಮಾಡಿರುವ ನಟಿ ಮೆಟ್ರೋ ಅಧಿಕಾರಿಗಳು ಹಾಗೂ ಕೇರಳ ಪೋಲೀಸರ ಗಮನ ಸೆಳೆದಿದ್ದಾರೆ. 
"ನಾನು ಕಾರಿನಲ್ಲಿ ಏರ್ ಪೋರ್ಟ್ ಗೆ ತೆರಳುತ್ತಿದ್ದಾಗ ಕಾರಿನ ಮೇಲೆ ಮೆಟ್ರೋ ಕಾಮಗಾರಿಯ ಸ್ಲ್ಯಾಬ್, ಸಿಮೆಂಟ್ ಅವಶೇಷಗಳು ಬಿದ್ದಿವೆ. ಸಧ್ಯ ಯಾವ ಅಪಾಯವಾಗಿಲ್ಲ. ಆದರೆ ಮೆಟ್ರೋ ಅಧಿಕಾರಿಗಳು, ಪೋಲೀಸರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ಕಾರಿಗೆ ಹಾನಿಯಾಗಿದ್ದು ಕಾರ್ ಮಾಲೀಕರಿಗೆ, ಚಾಲಕನಿಗೆ ಪರಿಹಾರ ನೀಡಿರಿ. ಮುಂದೆ ಇಂತಹಾ ಅವಘಡವಾಗದಂತೆ ಜಾಗೃತೆ ವಹಿಸಿ" ನಟಿ ಟ್ವೀಟ್ ಮಾಡಿಕೊಂಡಿದ್ದಾರೆ.

ತೆಲುಗಿನ 'ಬ್ಯಾಕ್ ಬೆಂಚ್ ಸ್ಟುಡೆಂಟ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಅರ್ಚನಾ ಮಲಯಾಳಂ ನಲ್ಲಿ ಸಾಕಷ್ಟು ಜನಪ್ರಿಯ ನಟಿಯಾಗಿದ್ದಾರೆ. ಅವರು ಬುಧವಾರ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp