'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ'ಕ್ಕೆ ಶುಭಾ ಪೂಂಜಾ, ಕಾರುಣ್ಯಾ ರಾಮ್ ಮತ್ತು ರಚನಾ ಮೆರಗು!

ಸುಜಯ್ ಶಾಸ್ತ್ರಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಮುಖ್ಯಭೂಮಿಕೆ ರಾಜ್ ಬಿ. ಶೆಟ್ಟಿ ಮತ್ತು ಕವಿತಾ ಗೌಡ ನಟಿಸಿದ್ದಾರೆ....

Published: 08th June 2019 12:00 PM  |   Last Updated: 08th June 2019 02:40 AM   |  A+A-


Shubha Poonja, Karunya Ram

ಶುಭಾ ಪೂಂಜಾ ಮತ್ತು ಕಾರುಣ್ಯಾ ರಾಮ್

Posted By : SD SD
Source : The New Indian Express
ಸುಜಯ್ ಶಾಸ್ತ್ರಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಮುಖ್ಯಭೂಮಿಕೆ ರಾಜ್ ಬಿ. ಶೆಟ್ಟಿ ಮತ್ತು ಕವಿತಾ ಗೌಡ ನಟಿಸಿದ್ದಾರೆ.

ಆದರೆ ಈಗ ಚಿತ್ರತಂಡಕ್ಕೆ ಶುಭಾ ಪೂಂಜಾ  ಅವರ ಜತೆಗೆ ಕಾರುಣ್ಯಾ ರಾಮ್ ಮತ್ತು ರಚನಾ ಕೂಡ ಸಾಥ್ ನೀಡಿದ್ದಾರೆ.

ಹಾಗಂತ ಅವರ್ಯಾರೂ ಇಡೀ ಸಿನಿಮಾದಲ್ಲಿ ನಟಿಸಿಲ್ಲ. ಬದಲಿಗೆ, ಒಂದು ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಬ್ರಹ್ಮಾಸ್ತ್ರ ದ ಮೆರುಗು ಹೆಚ್ಚಿಸಿದ್ದಾರೆ. 

‘ಕಥಾನಾಯಕಿ ಪರ್ಪಲ್ ಪ್ರಿಯಾ ಯಾವ ರೀತಿ ಇರಬಹುದು ಎಂಬುದನ್ನು ಹೀರೋ
ರಾಜ್ ಬಿ. ಶೆಟ್ಟಿ ಕನಸಿನಲ್ಲಿ ಕಲ್ಪಿಸಿಕೊಳ್ಳುವಾಗ ಈ ಹಾಡು ಬರುತ್ತದೆ. ಅದರಲ್ಲಿ ಶುಭಾ ಪೂಂಜಾ, ಕಾರುಣ್ಯಾ ಮತ್ತು ರಚನಾ ಕಾಣಿಸಿಕೊಳ್ಳುತ್ತಾರೆ. 

ಮೈತ್ರಿ ಅಯ್ಯರ್ ಹಿನ್ನೆಲೆ ಗಾಯನವಿದೆ, ಜೂನ್ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ಚಿತ್ರ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 
Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp