ತಮಿಳು ನಾಟಕ, ಚಿತ್ರ ಕಥೆಗಾರ, ನಟ ಕ್ರೇಜಿ ಮೋಹನ್ ನಿಧನ

ನಾಟಕ, ಚಿತ್ರ ಬರಹಗಾರ ಹಾಗೂ ನಟ ಕ್ರೇಜಿ ಮೋಹನ್ ಅವರು ಸೋಮವಾರ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕ್ರೇಜಿ ಮೋಹನ್
ಕ್ರೇಜಿ ಮೋಹನ್
ಚೆನ್ಮೈ: ನಾಟಕ ಬರಹಗಾರ, ಚಿತ್ರ ಕಥೆಗಾರ ಹಾಗೂ ನಟ ಕ್ರೇಜಿ ಮೋಹನ್ ಅವರು ಸೋಮವಾರ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
67 ವರ್ಷದ ನಟ ಕ್ರೇಜಿ ಮೋಹನ್ ಅವರು ನಿಧನರಾಗಿದ್ದಾರೆ ಎಂದು ಕ್ರೇಜಿ ಮೋಹನ್ ಅವರ ಡ್ರಾಮಾ ತಂಡದ ಸದಸ್ಯ, ನಟ ಸತೀಶ್ ಅವರು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ ಮನೆಯಲ್ಲಿಯೇ ಮೋಹನ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಧ್ಯಾಹ್ನ 2 ಗಂಟೆಗೆ ಅಧಿಕೃತವಾಗಿ ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com