'ಯುವರತ್ನ' ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬಾಡಿ ಬಿಲ್ಡರ್ ಮಮತಾ ಸನತ್ ಕುಮಾರ್

ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ಅಭಿನಯದ "ಯುವರತ್ನ" ಚಿತ್ರೀಕರಣ ಮೈಸೂರಿನಲ್ಲಿ ಸಾಗಿದ್ದು "ಟಗರು" ಖ್ಯಾತಿಯ ತ್ರಿವೇಣಿ ರಾವ್ ಜತೆಗೆ ಕನ್ನಡದ ಮೊದಲ ಮಹಿಳಾ....

Published: 13th June 2019 12:00 PM  |   Last Updated: 13th June 2019 12:07 PM   |  A+A-


Body builder Mamatha Sanathkumar makes her Sandalwood debut

ಯುವರತ್ನ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಬಾಡಿ ಬಿಲ್ಡರ್ ಮಮತಾ ಸನತ್ ಕುಮಾರ್

Posted By : RHN RHN
Source : The New Indian Express
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಪವರ್ ಸ್ಟಾರ್ ಪುನೀತ್ ಅಭಿನಯದ "ಯುವರತ್ನ" ಚಿತ್ರೀಕರಣ ಮೈಸೂರಿನಲ್ಲಿ ಸಾಗಿದ್ದು "ಟಗರು" ಖ್ಯಾತಿಯ ತ್ರಿವೇಣಿ ರಾವ್  ಜತೆಗೆ ಕನ್ನಡದ ಮೊದಲ ಮಹಿಳಾ ಬಾಡಿ ಬಿಲ್ಡರ್  ಮಮತಾ ಸನತ್ ಕುಮಾರ್ ಸಹ ಸೆಟ್ ನಲ್ಲಿದ್ದಾರೆ.

ತ್ರಿವೇಣಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ "ಯುವರತ್ನ" ಚಿತ್ರದಲ್ಲಿ ಅಪ್ಪು (ಪುನೀತ್ ರಾಜ್ ಕುಮಾರ್) ಜತೆಗೆ ಅಭಿನಯಿಸಲು ಕಾತುರಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಮಮತಾ ದಕ್ಷಿಣ ಭಾರತದ ಬಾಡಿ ಬಿಲ್ಡರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದಾರೆ. ಈಗ ಅವರು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.

ಇದೀಗ ಮಮತಾ "ಯುವರತ್ನ" ಮೂಲಕ ಸ್ಯಾಡಲ್ ವುಡ್ ಗೆ ಪ್ರವೇಶಿಸುತ್ತಿದ್ದು ಪುನೀತ್ ರಾಜ್ ಕುಮಾರ್ ಜತೆ ತೆರೆ ಹಂಚಿಕೊಳ್ಳುತ್ತೊಇದ್ದಾರೆ. ಪುನೀತ್ ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಸಧ್ಯ ತಮ್ಮ ಪಾತ್ರದ ಡೈಲಾಗ್ ಹಾಗೂ ನಟನೆಯ ಅಭ್ಯಾಸದಲ್ಲಿದ್ದಾರೆಂದು ಚಿತ್ರತಂಡದ ಮೂಲಗಳು ಹೇಳಿವೆ. ಆದ್ರೆ ನಿರ್ಮಾಪಕರು ಈ ಇಬ್ಬರು ನಟಿಯರ ಪಾತ್ರದ ಬಗೆಗೆ ಯಾವ ವಿವರವನ್ನೂ ನೀಡಿಲ್ಲ.

ಹಂಬಲ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ "ಯುವರತ್ನ" ಚಿತ್ರ ನಿರ್ದೇಶಕ ಸಂತೋಷ್ ಹಾಗೂ ಪುನೀತ್ ಜೋಡಿಯ ಎರಡನೇ ಚಿತ್ರವಾಗಿದೆ.ಇನ್ನು ಈ ಚಿತ್ರದಲ್ಲಿ ನವನಟಿ ಸಯ್ಯೇಶಾ ಅಭಿನಯಿಸುತ್ತಿದ್ದಾರೆ. ರಾಧಿಕಾ ಶರತ್ ಕುಮಾರ್ ಸಹ ಬಹು ದಿನಗಳ ಬಳಿಕ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp