ನಮಗೂ ಹೆಲ್ಪ್ ಮಾಡಿ: ದರ್ಶನ್​ಗೆ ಖ್ಯಾತ ಥ್ರೋ ಬಾಲ್ ಆಟಗಾರ್ತಿ ಮನವಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದಕ್ಕೆ ಎತ್ತಿದ ಕೈ ಎನ್ನುವುದು ಎಲ್ಲರಿಗೆ ತಿಳಿದ ಸಂಗತಿ, ಇತ್ತೀಚಿಗೆ ಹಿರಿಯ ನಟ ಭಾಸ್ಕರ್ ಗೆ ಸಹಾಯ ಹಸ್ತ ಚಾಚಿದ್ದ ದರ್ಶನ್ ಬಗ್ಗೆ...

Published: 14th June 2019 12:00 PM  |   Last Updated: 14th June 2019 06:33 AM   |  A+A-


National level throw ball player Krupa GP requests actor Darshan for help

ನಮಗೂ ಹೆಲ್ಪ್ ಮಾಡಿ: ದರ್ಶನ್​ಗೆ ಖ್ಯಾತ ಥ್ರೋ ಬಾಲ್ ಆಟಗಾರ್ತಿ ಮನವಿ

Posted By : RHN RHN
Source : Online Desk
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದಕ್ಕೆ ಎತ್ತಿದ ಕೈ ಎನ್ನುವುದು ಎಲ್ಲರಿಗೆ ತಿಳಿದ ಸಂಗತಿ, ಇತ್ತೀಚಿಗೆ ಹಿರಿಯ ನಟ ಭಾಸ್ಕರ್ ಗೆ ಸಹಾಯ ಹಸ್ತ ಚಾಚಿದ್ದ ದರ್ಶನ್ ಬಗ್ಗೆ ಎಲ್ಲರೂ ಅಭಿಮಾನ ಪಟ್ಟಿದ್ದರು. ಈಗ ಖ್ಯಾತ ಥ್ರೋ ಬಾಲ್ ಆಟಗಾರ್ತಿಯೊಬ್ಬರು ಡಿ ಬಾಸ್ ದರ್ಶನ್  ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಭಾರತ ಥ್ರೋ ಬಾಲ್ ತಂಡದ ನಾಯಕಿಯಾಗಿರುವ ಕೃಪಾ ಜೆಪಿ ದರ್ಶನ್  ಅಭಿಮಾನಿಯೂ ಆಗಿದ್ದು ಇದೀಗ ನಟನ ಬಳಿ ಮನವಿ ಮಾಡಿಕೊಂಡಿದ್ದಾರೆ.

"ರಾಜ್ಯದಲ್ಲಿ ಸಾಕಷ್ಟು ಉದಯೋನ್ಮುಖ ಆಟಗಾರರಿದ್ದಾರೆ. ಅವರು ಥ್ರೋ ಬಾಲ್ ಕ್ರೀಡೆಯಲ್ಲಿ ಮುಂದೆ ಬರಲು ಇಚ್ಚಿಸುತ್ತಿದ್ದಾರೆ.ಆದರೆ ಅನೇಕ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನೀವು ಕ್ರೀಡೆ, ಕ್ರೀಡಾಪಟುಗಳಿಗೆ ಬೆಂಬಲವಾಗಿ ನಿಲ್ಲಬೇಕು.

"ನಮ್ಮ ರಾಜ್ಯದಲ್ಲಿ ಉತ್ತಮ ಆಟಗಾರರಿದ್ದೂ ಥ್ರೋ ಬಾಲ್ ಅಷ್ಟೊಂದು ಜನಪ್ರಿಯವಾಗಿಲ್ಲ.ಹಾಗಾಗಿ ನೀವು ಥ್ರೋ ಬಾಲ್ ಮಹಿಳಾ ತಂಡಕ್ಕೆ ಪ್ರೋತ್ಸಾಹ ನೀಡಬೇಕು. ಇದರಿಂದ ಅನೇಕ ಕ್ರೀಡಾಪಟುಗಳಿಗೆ ಸಹಾಯವಾಗಲಿದೆ.ಸಹಾಯ ಮಾಡಿ, ನಮ್ಮನ್ನು ಬೆಂಬಲಿಸಿ" ಕೃಪಾ ವೀಡಿಯೋ ಮೂಲಕ ದರ್ಶನ್ ಗೆ ಮನವಿ ಸಲ್ಲಿಸಿದ್ದಾರೆ.

ದರ್ಶನ್ ಅಭಿಮಾನಿಗಳು ಇದೀಗ ಕೃಪಾ ಅವರ ವೀಡಿಯೋವನ್ನು ತಾವು ಹಂಚಿಕೊಳ್ಳುವ ಮೂಲಕ ಅದನ್ನು ತಮ್ಮ ನೆಚ್ಚಿನ ನಟನಿಗೆ ತಲುಪಿಸಲು ನೊಡುತ್ತಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp