ರಾಬರ್ಟ್ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ವಿನೋದ್ ಪ್ರಭಾಕರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ ನಟ ವಿನೋದ್ ಪ್ರಭಾಕರ್ ಕೂಡ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು,...
ದರ್ಶನ್ ಮತ್ತು ವಿನೋದ್ ಪ್ರಭಾಕರ್
ದರ್ಶನ್ ಮತ್ತು ವಿನೋದ್ ಪ್ರಭಾಕರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲಿ  ನಟ ವಿನೋದ್ ಪ್ರಭಾಕರ್ ಕೂಡ ಅಭಿನಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು, ಅದಕ್ಕೆ ಸಾಕ್ಷಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ಹರಿದಾಡುತ್ತಿದೆ. 
ರಾಬರ್ಟ್‌ ಸಿನಿಮಾದಲ್ಲಿ ದರ್ಶನ್‌ ಮತ್ತು ವಿನೋದ್‌ ಪ್ರಭಾಕರ್‌ ಒಟ್ಟಿಗೆ ಬೈಕ್‌ ಬಳಿ ನಿಂತಿರುವ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 
ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾದ ಥೀಮ್‌ ಪೋಸ್ಟರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆದರೆ ಇದರಲ್ಲಿ ದರ್ಶನ್‌ ಸೇರಿ ಯಾವುದೇ ಕಲಾವಿದರ ಲುಕ್‌ ರಿವೀಲ್‌ ಆಗಿರಲಿಲ್ಲ. 
ಮೂಲಗಳ ಪ್ರಕಾರ ಈ ಸ್ಟಿಲ್‌ ಫೋಟೋ ಶೂಟ್‌ ಸಮಯದಲ್ಲಿ ತೆಗೆದಿದ್ದು ಎನ್ನಲಾಗುತ್ತಿದೆ. ಸಿನಿಮಾದ ಕಂಟೆಂಟ್‌ ಹೊರ ಹೋಗುತ್ತದೆ ಎಂಬ ಕಾರಣಕ್ಕೆ ನಿರ್ದೇಶಕ ತರುಣ್‌ ಸುಧೀರ್‌ ಸೆಟ್‌ನಲ್ಲಿ ಮೊಬೈಲ್‌ ಬ್ಯಾನ್‌ ಮಾಡಿದ್ದರು.ಆದರೂ ಈ ಫೋಟೋ ಹೊರ ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com