ಅಮೆರಿಕಾದ ಈ ನಗರದಲ್ಲಿ ಮೇ 12 ವಿಜಯ್ ಪ್ರಕಾಶ್ ದಿನ

ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಅಮೆರಿಕಾದಲ್ಲಿಯೂ ಗೌರವ ಸಿಕ್ಕಿದೆ.ಕನ್ನಡದ ...

Published: 16th June 2019 12:00 PM  |   Last Updated: 16th June 2019 02:36 AM   |  A+A-


Vijay Prakash

ವಿಜಯ್ ಪ್ರಕಾಶ್

Posted By : SUD SUD
Source : Online Desk
ಬೆಂಗಳೂರು: ಕನ್ನಡದ ಹೆಮ್ಮೆಯ ಗಾಯಕ ವಿಜಯ್ ಪ್ರಕಾಶ್ ಅವರಿಗೆ ಅಮೆರಿಕಾದಲ್ಲಿಯೂ ಗೌರವ ಸಿಕ್ಕಿದೆ.ಅಮೆರಿಕಾದ ನಾರ್ತ್​​ ಕರೋಲಿನಾ ಮೇ 12ನ್ನು ವಿಜಯ್ ಪ್ರಕಾಶ್ ಡೇ ಅಂತಾ ಆಚರಿಸಲಾಗುತ್ತಿದೆ. ಇದು ಕನ್ನಡಿಗರಿಗೊಬ್ಬರಿಗೆ ಸಿಕ್ಕ ಬಹುದೊಡ್ಡ ಸನ್ಮಾನ.

ಅಮೆರಿಕದ ದಕ್ಷಿಣ ಕರೊಲಿನಾ ರಾಜ್ಯದ ಕಾನ್​ಕಾರ್ಡ್ ನಗರದ ಮೇಯರ್ ವಿಲಿಯಮ್ ಸಿ. ಡಷ್ ಘೋಷಿಸಿದ್ದಾರೆ. ವಿದೇಶಗಳಲ್ಲೂ ವಿಜಯ್ ಪ್ರಕಾಶ್​ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಕಳೆದ ತಿಂಗಳು ಮೇ 12ರಂದು ಕಾನ್​ಕಾರ್ಡ್ ನಗರದಲ್ಲಿ ನಡೆದ ಒಂದು ಸಂಗೀತ ಕಾರ್ಯಕ್ರಮದಲ್ಲಿ ಗಾನ ಸುಧೆ ಹರಿಸಿದ ವಿಜಯ್ ಪ್ರಕಾಶ್ ಕಂಠ ಸಿರಿಗೆ ಅಲ್ಲಿನ ಅಭಿಮಾನಿಗಳು ಮನಸೋತಿದ್ದಾರೆ.

ಸಾವಿರಾರು ಜನರು ನೆರೆದಿದ್ದ ಆ ಕಾರ್ಯಕ್ರಮಕ್ಕೆ ಕಾನ್​ಕಾರ್ಡ್ ಮೇಯರ್ ಕೂಡ ಸಾಕ್ಷಿಯಾದರಂತೆ. ನಂತರ ವಿಜಯ್ ಪ್ರಕಾಶ್ ಸಾಧನೆ ಬಗ್ಗೆ ತಿಳಿದುಕೊಂಡ ಅವರು ಆ ದಿನವನ್ನು ‘ವಿಜಯ್ ಪ್ರಕಾಶ್ ದಿನ’ ಎಂದು ಘೋಷಿಸಿದ್ದಾರೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp