ರೆಟ್ರೋ ಲುಕ್ ನಲ್ಲಿ ಸತೀಶ್ ನಿನಾಸಂ!

ಬಹ್ಮಚಾರಿ ಚಿತ್ರ ಬಿಡುಗಡೆ ಎದುರು ನೋಡುತ್ತಿರುವ ಸತೀಶ್ ನಿನಾಸಂ ಅವರು ಜೂನ್ 20ರಂದು ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಈ ಮಧ್ಯೆ ಮತ್ತೊಂದು ಚಿತ್ರಕ್ಕೆ ಸತೀಶ್ ಸಹಿ ಹಾಕಿದ್ದಾರೆ.
ಸತೀಶ್ ನಿನಾಸಂ
ಸತೀಶ್ ನಿನಾಸಂ
ಬಹ್ಮಚಾರಿ ಚಿತ್ರ ಬಿಡುಗಡೆ ಎದುರು ನೋಡುತ್ತಿರುವ ಸತೀಶ್ ನಿನಾಸಂ ಅವರು ಜೂನ್ 20ರಂದು ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಈ ಮಧ್ಯೆ ಮತ್ತೊಂದು ಚಿತ್ರಕ್ಕೆ ಸತೀಶ್ ಸಹಿ ಹಾಕಿದ್ದಾರೆ.
ದೇವರಾಜ್ ಪೂಜಾರಿ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಸತೀಶ್ ನಿನಾಸಂ ನಟಿಸಲಿದ್ದಾರೆ. ಚಿತ್ರಕ್ಕೆ ಸಂಭಾಷಣೆ ಮತ್ತು ಕಥೆಯನ್ನು ಮಾಸ್ತಿ ಎಂಬುವರು ಬರೆದಿದ್ದಾರೆ. ಇದೊಂದು ಥ್ರಿಲ್ಲರ್ ಡ್ರಾಮಾ. 80ರ ಶತಕದಲ್ಲಿ ನಡೆಯುವ ಕಥೆಯಾಗಿರುವುದರಿಂದ ಸತೀಶ್ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸದ್ಯ ಸತೀಶ್ ಚಿತ್ರಕ್ಕಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಜುಲೈ ಕೊನೆಯಲ್ಲಿ ಚಿತ್ರ ಸೆಟ್ಟೇರಲಿದೆ. ಗೋದ್ರಾ ಚಿತ್ರದ ಹಾಡೊಂದು ಬಾಕಿಯಿದ್ದು ಆ ಕೆಲಸಗಳನ್ನು ಸತೀಶ್ ಮುಗಿಸಿಕೊಳ್ಳಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com