ಭಜರಂಗಿ 2: ಹೆಸರು ಮಾತ್ರ ಅದೇ, ಕಥೆ ಮಾತ್ರ ಸಂಪೂರ್ಣ ವಿಭಿನ್ನ

ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್​ಕುಮಾರ್ ಕಾಂಬಿನೇಷನ್​ನಲ್ಲಿ ಬಂದ ಭಜರಂಗಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ‘ಭಜರಂಗಿ 2’ ಘೋಷಣೆ ಆಗಿದೆ. ಇತ್ತೀಚೆಗೆ ಚಿತ್ರಕ್ಕೆ ...
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
ನಿರ್ದೇಶಕ ಎ. ಹರ್ಷ ಮತ್ತು ನಟ ಶಿವರಾಜ್​ಕುಮಾರ್ ಕಾಂಬಿನೇಷನ್​ನಲ್ಲಿ ಬಂದ ಭಜರಂಗಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ‘ಭಜರಂಗಿ 2’ ಘೋಷಣೆ ಆಗಿದೆ. ಇತ್ತೀಚೆಗೆ ಚಿತ್ರಕ್ಕೆ ಸರಳ ಮುಹೂರ್ತ ಸಮಾರಂಭ ನೆರವೇರಲಿದ್ದು, ಚಿತ್ರೀಕರಣಕ್ಕೂ ಚಾಲನೆ ನೀಡಲಾಗುತ್ತಿದೆ.
ಈಗಾಗಲೇ ಈ ಚಿತ್ರಕ್ಕೆ ಫೋಟೋ ಶೂಟ್ ಮಾಡಲಾಗಿದೆ. ಆದರೆ ಶಿವಣ್ಣನ ಲುಕ್ ಹೇಗಿದೆ ಎಂಬುದು ಬಹಿರಂಗ ಆಗಿಲ್ಲ. ಹಾಗಾದರೆ ‘ಭಜರಂಗಿ 2’ ಚಿತ್ರದಲ್ಲಿ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಜು.12ರಂದು ಉತ್ತರ ಸಿಗಲಿದೆ. ಅಂದರೆ, ಅಂದು ‘ಹ್ಯಾಟ್ರಿಕ್ ಹೀರೋ’ ಜನ್ಮದಿನ. ಆ ಪ್ರಯುಕ್ತ ಶಿವಣ್ಣ ಫಸ್ಟ್​ಲುಕ್ ಬಿಡುಗಡೆ ಮಾಡಲಿದ್ದಾರೆ.
ಜುಲೈ 4ರವರೆಗೂ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು, ಆ ಬಳಿಕ ಶಿವರಾಜ್​ಕುಮಾರ್ ಲಂಡನ್​ಗೆ ತೆರಳಲಿದ್ದಾರೆ. ಜು.12ರಂದು ಅವರು ಲಂಡನ್​ನಲ್ಲಿ ಇರುವುದರಿಂದ ಅಲ್ಲಿಂದಲೇ ಫಸ್ಟ್ ಲುಕ್ ಅನಾವರಣ ಮಾಡಲಿದ್ದಾರೆ.
ಭಜರಂಗಿ ಸಿನಿಮಾ ಟೈಟಲ್ ಮಾತ್ರ ಹಳೆಯದ್ದು, ಆದರೆ ಕಥೆಗೂ ಹಿಂದಿನ ಭಜರಂಗಿ ಸಿನಿಮಾಗೂ ಯಾವುದೇ ಹೋಲಿಕೆಯಿಲ್ಲ, ಸಂಪೂರ್ಣ ವಿಭಿನ್ನವಾಗಿದೆ,.ಭಾವನಾ  ನಾಯಕಿಯಾಗಿ ನಟಿಸುತ್ತಿದ್ದು, ಜೂನ್ 24 ರಿಂದ ಸೆಟ್ ಗೆ ಆಗಮಿಸಲಿದ್ದಾರೆ. 
ಬಹುತೇಕ ಹೊಸ ಕಲಾವಿದರಿಗೆ ಅವಕಾಶ ನೀಡಲು ಎ. ಹರ್ಷ ನಿರ್ಧರಿಸಿದ್ದಾರಂತೆ. ಯಾಕೆಂದರೆ ಹೊಸಬರು ಬದ್ಧತೆಯಿಂದ ಕೆಲಸ ಮಾಡುತ್ತಾರೆ ಹಾಗೂ ಶೂಟಿಂಗ್​ಗೆ ಹೆಚ್ಚು ಸಮಯ ಮೀಸಲಿಡುತ್ತಾರೆ ಎಂಬುದು ನಿರ್ದೇಶಕರ ಅಭಿಪ್ರಾಯ. ‘ಭಜರಂಗಿ’ಗೆ ಸಂಗೀತ ಸಂಯೋಜನೆ ಮಾಡಿದ್ದ ಅರ್ಜುನ್ ಜನ್ಯ ಈ ಬಾರಿಯೂ ಚಿತ್ರತಂಡದಲ್ಲಿ ಮುಂದುವರಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com