ನನ್ನ ಮುಂದಿನ ಸಿನಿಮಾ ಯಾವುದು ಎಂದು ನಿರ್ಧರಿಸುವುದು ನಾನು: ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಗೆ ಸೂರಿ ಟಾಂಗ್

ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೆಸರು ಹೇಳಿಕೊಂಡು ಹಾಕುವ ಪೋಸ್ಟ್ ಗಳ ಸತ್ಯಾಸತ್ಯತೆಗಳ ಬಗ್ಗೆ ತಿಳಿದುಕೊಂಡು ತಮ್ಮ ಫಾಲೋವರ್ಸ್ ನಂಬಬೇಕು ಎಂದು ..

Published: 20th June 2019 12:00 PM  |   Last Updated: 20th June 2019 12:05 PM   |  A+A-


I am the one to decide on my next move, says director Suri

ಕೆ.ಪಿ ಶ್ರೀಕಾಂತ್, ಸೂರಿ ಮತ್ತು ಸುದೀಪ್

Posted By : SD SD
Source : The New Indian Express
ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೆಸರು ಹೇಳಿಕೊಂಡು ಹಾಕುವ ಪೋಸ್ಟ್ ಗಳ ಸತ್ಯಾಸತ್ಯತೆಗಳ ಬಗ್ಗೆ ತಿಳಿದುಕೊಂಡು ತಮ್ಮ ಫಾಲೋವರ್ಸ್ ನಂಬಬೇಕು ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ.

ನಟ ಸುದೀಪ್ ಅವರ ಮುಂದಿನ ಸಿನಿಮಾವನ್ನು ಸೂರಿ ನಿರ್ದೇಶಿಸುತ್ತಾರೆ ಎಂದು ನಿರ್ಮಾಪಕ ಕೆ.ಪಿ  ಶ್ರೀಕಾಂತ್  ಹೇಳಿದ್ದರು. ಈ ವಿಷಯ ವೈರಲ್ ಆಗಿತ್ತು. ಈ ವಿಷಯವಾಗಿ ಗರಂ ಆಗಿರುವ ಸೂರಿ, ನನ್ನ ಹೆಸರಿನಲ್ಲಿ ಏನೆಲ್ಲಾ ಕೇಳಿಬರುತ್ತಿದೆಯೋ ಅದೆಲ್ಲಾ ಸುಳ್ಳು, 

ನನ್ನ ಕೆಲಸದ ಬಗ್ಗೆ ನಾನೂ ಎಲ್ಲಿಯೂ ಉತ್ಪ್ರೇಕ್ಷೆಯಾಗಿ ಹೇಳಿಕೊಳ್ಳುವುದಿಲ್ಲ, ಆದರೆ ಇದನ್ನು ಚಿತ್ರೀಕರಿಸುತ್ತಿರುವ ರೀತಿ ಸರಿಯಲ್ಲ ಎಂದು ಸೂರಿ ಹೇಳಿದ್ದಾರೆ, ನಾನು ಈ ಸಂಬಂಧ ಮೂರು ಬಾರಿ ಸೈಬರ್ ಕ್ರೈಂ ಸೆಲ್ ಗೆ ದೂರು ನೀಡಿದ್ದೇನೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ.

ನಾನು ಮೊಬೈಲ್ ನ ಇನ್ ಬಾಕ್ಸ್ ನಲ್ಲಿ ಮಾತ್ರ ಮೆಸೇಜ್ ಮಾಡುವುದು. ಮತ್ತು ಇ ಮೇಲ್ ಅಕೌಂಟ್ ಇದೆ, ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಯಾವುದೇ ಆಡಿಶನ್ ರಿಕ್ವೇಸ್ಟ್ ಕಳಿಸಿಲ್ಲ, ನನ್ನ ಮುಂದಿನ ಸಿನಿಮಾ ಬಗ್ಗೆ ಯಾವ ನಿರ್ಮಾಪಕರು  ಪ್ಲಾನ್ ಮಾಡಬೇಕಿಲ್ಲ ಎಂದು ಹೇಳಿದ್ದಾರೆ.

ಸುದೀಪ್ ಅವರ ಮುಂದಿನ ಸಿನಿಮಾವನ್ನು ಸೂರಿ ನಿರ್ದೇಶಿಸಲಿದ್ದಾರೆ ಎಂಬ ನಿರ್ಮಾಪಕ  ಕೆ.ಪಿ ಶ್ರೀಕಾಂತ್ ಹೇಳಿಕೆಗೆ ಗರಂ ಆಗಿರುವ ಸೂರಿ, ಸುದೀಪ್ ಅವರನ್ನು ನಾನು ರಂಗ ಎಸ್ ಎಸ್ ಎಲ್ ಸಿಯಿಂದ ನೋಡಿದ್ದೇನೆ, ಅವರೊಬ್ಬ ಉತ್ತಮ ನಟ, ಅವರಿಗಾಗಿ ಕೆಲಸ ಮಾಡಬೇಕೆಂದರೇ ಸಮಯ ತೆಗೆದುಕೊಳ್ಳುತ್ತಗೆ, ವಿಭಿನ್ನವಾಗಿ ಅವರಿಗಾಗಿ ನಾನು ಸಿದ್ಧತೆ ಮಾಡಿಕೊಳ್ಳಬೇಕು, ಆಗ ಮಾತ್ರ ಅವರ ಜೊತೆ ಕೆಲಸ ಮಾಡಲು ಸಾಧ್ಯ,. ಅದನ್ನು ನಾನು ಹಿಂದೆ ಅವರ ಜೊತೆ ಮಾತನಾಡಿದ್ದಾಗ ತಿಳಿಸಿದ್ದೇನೆ.

ಸಮಯದ ಮಿತಿಯಲ್ಲಿ ಕೆಲಸ ಮಾಡಲು ಅವರು ಇಷ್ಟ ಪಡುವುದಿಲ್ಲ, ಸದ್ಯ ನನ್ನ ಮುಂದಿನ ಸಿನಿಮಾಗಾಗಿ ಕೆಲಸ ನಡೆಯುತ್ತಿದೆ, ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾಗಾಗಿ ಕೆಲಸ ನಡೆಯುತ್ತಿದೆ, ಮುಂದಿನದ್ದು ಕಾಗೆ ಬಂಗಾರ ಎಂದು ಸೂರಿ ಹೇಳಿದ್ದಾರೆ. 

ಶ್ರೀಕಾಂತ್ ಮತ್ತು ಸೂರಿ ಟಗರು ಸಿನಿಮಾಗಾಗಿ ಕೆಲಸ ಮಾಡಿದ್ದರು. ಮತ್ತೊಂದು ಸಿನಿಮಾಗಾಗಿ ಒಟ್ಟಿಗೆ ಸೇರಿದ್ದರು,  ಆದರೆ ಕೆಲವು ದಿನಗಳ ನಂತರ ಚಿತ್ರದಿಂದ ಹೊರ ಬಂದರು ಹೀಗಾಗಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಸುಧೀರ್ ನಿರ್ಮಾಪಕರಾಗಿ ಬದಲಾದರು. 

ಸೂರಿ ಪಾಪ್ ಕಾರ್ನ್ ಮಂಕಿ ಕಥೆ ಶ್ರೀಕಾಂತ್ ಅವರಿಗೆ ಇಷ್ಟವಾಗಿಲ್ಲ, ನಮ್ಮದು ಬ್ಯುಸಿನೆಸ್ ಒಪ್ಪಂದವಾಗಿದೆ ಎಂದು ಟಗರು-2 ಗಾಗಿ ಮಾಡಲು ಚಿಂತಿಸಿದೆ, ಆದರೆ ಅದು ಸಾಧ್ಯವಾಗದು ಎಂದು ನನಗೆ ತಿಳಿಯಿತು, ಏಕೆಂದರೆ ನನ್ನ ಹಿಂದಿನ ಎಲ್ಲಾ ಸಿನಿಮಾ ಕಥೆಗಳು ಮುಕ್ತವಾಗಿ ಅಂತ್ಯವಾಗಿವೆ, ದುನಿಯಾ, ಜಾಕಿ ಮತ್ತು ಟಗರು ಸಿನಿಮಾಗಳನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp