ಕಾಳಿದಾಸ ಬಳಿಕ ಸಂತೋಷ್ ನಿರ್ದೇಶನದಲ್ಲಿ ಮೇಘನಾ ಗಾವಂಕರ್ ಮುಂದಿನ ಚಿತ್ರ!

ಕಾಳಿದಾಸ ಕನ್ನಡ ಮೇಸ್ಟ್ರು ಚಿತ್ರದ ಶೂಟಿಂಗ್ ಮುಗಿಸಿರುವ ಮೇಘನಾ ಗಾವಂಕರ್ ಅವರು ಇದೀಗ ಸಂತೋಷ್ ಜಿ ಅವರ ಚೊಚ್ಚಲ ನಿರ್ದೇಶನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಮೇಘನಾ ಗಾವಂಕರ್
ಮೇಘನಾ ಗಾವಂಕರ್
ಕಾಳಿದಾಸ ಕನ್ನಡ ಮೇಸ್ಟ್ರು ಚಿತ್ರದ ಶೂಟಿಂಗ್ ಮುಗಿಸಿರುವ ಮೇಘನಾ ಗಾವಂಕರ್ ಅವರು ಇದೀಗ ಸಂತೋಷ್ ಜಿ ಅವರ ಚೊಚ್ಚಲ ನಿರ್ದೇಶನ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಕಿರುಚಿತ್ರಗಳ ನಿರ್ದೇಶಕ ಸಂತೋಷ್ ಜಿ ಅವರು ಇದೀಗ ಚೊಚ್ಚ ಕನ್ನಡ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂತೋಷ್ ಅವರ ಕಥೆ ನನಗೆ ತುಂಬ ಇಷ್ಟವಾಗಿದ್ದು ಚಿತ್ರದಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದೇನೆ. ಇನ್ನು ಚಿತ್ರದ ಶೂಟಿಂಗ್ ಇದೇ ವಾರದಿಂದ ಪ್ರಾರಂಭವಾಗಲಿದೆ ಎಂದು ಮೇಘನಾ ಹೇಳಿದ್ದಾರೆ.
ಚಿತ್ರಕ್ಕೆ ಇನ್ನು ಶೀರ್ಷಿಕೆ ಇಟ್ಟಿಲ್ಲ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದಾಗಲಿದೆ. ಇನ್ನು ಚಿತ್ರಕ್ಕೆ ಜೂದಾ ಸ್ಯಾಂಡಿ ಸಂಗೀತ ಸಂಯೋಜಿಸುತ್ತಿದ್ದು ರಾಕೇಶ್ ಅವರ ಛಾಯಾಗ್ರಹಣವಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com