2020ಕ್ಕೆ ವೆಬ್ ಸರಣಿಗೆ ಶಿವರಾಜ್ ಕುಮಾರ್ ಎಂಟ್ರಿ!

ಸದ್ಯ ರುಸ್ತುಂ ಮತ್ತು ಭಜರಂಗಿ 2 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್ ಕುಮಾರ್ 2020ಕ್ಕೆ ಮತ್ತೊಂದು ಸಾಹಸಕ್ಕೆ ಕೈ ಹಾಕಲಿದ್ದಾರೆ.

Published: 25th June 2019 12:00 PM  |   Last Updated: 25th June 2019 01:30 AM   |  A+A-


Shivaraj kumar

ಶಿವರಾಜ್ ಕುಮಾರ್

Posted By : VS VS
Source : The New Indian Express
ಸದ್ಯ ರುಸ್ತುಂ ಮತ್ತು ಭಜರಂಗಿ 2 ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ಶಿವರಾಜ್ ಕುಮಾರ್ 2020ಕ್ಕೆ ಮತ್ತೊಂದು ಸಾಹಸಕ್ಕೆ ಕೈ ಹಾಕಲಿದ್ದಾರೆ.

ಶಿವರಾಜ್ ಕುಮಾರ್ ಒಡೆತನದ ಶ್ರೀಮುತ್ತು ಸಿನಿ ಸರ್ವೀಸ್ ಸಂಸ್ಥೆಯನ್ನು ಶಿವಣ್ಣ ಅವರ ಪುತ್ರಿ ನಿವೇದಿತ ಮುನ್ನಡೆಸುತ್ತಿದ್ದು ಅದಾಗಲೇ ಹೇಟ್ ಯು ರೋಮಿಯೋ ಮತ್ತು ಹನಿಮೂನ್ ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗುತ್ತಿದೆ. 

ಮುಂದಿನ ವರ್ಷ ಒಂದು ವೆಬ್ ಸೀರಿಸ್ ನಲ್ಲಿ ನಾನು ನಟಿಸಬೇಕು ಅಂದುಕೊಂಡಿದ್ದೇನೆ. ಸಿನಿಮಾಗಳಿಗೆ ಹೋಲಿಸಿದರೆ ಅಲ್ಲಿನ ವಿಷಯಗಳು ಬೇರೆ ರೀತಿಯಲ್ಲಿ ಇರುತ್ತದೆ. ಇದುವರೆಗೂ ಚಿತ್ರಗಳಲ್ಲಿ ಮಾಡಲಾಗದ ಪಾತ್ರಗಳನ್ನು ಅಲ್ಲಿ ಮಾಡಬೇಕು ಎಂದುಕೊಂಡಿದ್ದೇನೆ. ಕಥೆ ಬರೆಯುವ ಕೆಲಸಗಳು ಚಾಲ್ತಿಯಲ್ಲಿವೆ ಎಂದರು.

ಸದ್ಯ 123 ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಅವರನ್ನು ಅನಾರೋಗ್ಯ ಸಹ ಕಾಡಿಟ್ಟು. ಈ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ಶಿವಣ್ಣ ಬ್ರೇಕ್ ತೆಗೆದುಕೊಳ್ಳುತ್ತಾರಾ ಕಾದು ನೋಡಬೇಕು. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp