ವೈಜಿಎಫ್ ಚಾಪ್ಟರ್-2: ಮಗಳ ನಾಮಕರಣದ ಬೆನ್ನಲ್ಲೇ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಯಶ್ ದಂಪತಿ!

ಮಗಳ ನಾಮಕರಣದ ಬೆನ್ನಲ್ಲೇ ನಟ ಯಶ್ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

Published: 26th June 2019 12:00 PM  |   Last Updated: 26th June 2019 07:12 AM   |  A+A-


Yash going to be father again

ಯಶ್ ದಂಪತಿ

Posted By : SBV SBV
Source : Online Desk
ಬೆಂಗಳೂರು: ಮಗಳ ನಾಮಕರಣದ ಬೆನ್ನಲ್ಲೇ ನಟ ಯಶ್ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. 

ಮೊದಲ ಮಗು ನಿರೀಕ್ಷೆಯಲ್ಲಿದ್ದಾಗ ಬಳಸಿದ್ದ ವೈಜಿಎಫ್ ಪದವನ್ನು ಯಶ್ ಈಗ ಮತ್ತೊಮ್ಮೆ ಬಳಸಿದ್ದು, ವೈಜಿಎಫ್ ಚಾಪ್ಟರ್-2  ''ಮತ್ತೊಂದು ಸಿಹಿ ಸುದ್ದಿ, ನಿಮ್ಮೆಲ್ಲರ ಪ್ರೀತಿ, ಹಾರೈಕೆ ನಮ್ಮ ಕುಟುಂಬದ ಮೇಲಿರಲಿ'' ಎಂದು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಯಶ್, ಮಗಳ ಮೂಲಕವೇ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.

ಆಯ್ರಾ ಫೋಟೋ ಜೊತೆಗೆ “ಎಲ್ಲರಿಗೂ ಹಾಯ್. ..  ನಮ್ಮ ಮನೆಗೆ ಇನ್ನೊಂದು ಪುಟ್ಟ ಪಾಪು ಬರುತ್ತಿದೆ. ಇದೇನು ಇಷ್ಟು ಬೇಗ ಅಂತೀರಾ? ಈ ಸುದ್ದಿಯನ್ನು ನೀವು ನಂಬ್ತೀರೋ, ಬಿಡ್ತೀರೋ.. ಆದರೆ ನಾನು ನನ್ನ ಆಟಿಕೆಗಳನ್ನು ಅದರ ಜೊತೆ ಶೇರ್ ಮಾಡಿಕೊಳ್ಳಬೇಕಾಗುತ್ತದೆ.  ನಮ್ಮಪ್ಪ ತುಂಬಾ ಸ್ಪೀಡ್.  ಸುದ್ದಿ ಶೇರ್ ಮಾಡೋಕೆ ನಾನೇ ತಡ ಮಾಡಿದ್ದೀನಿ” ಎಂದು ಮಗಳು ಹೇಳಿದಂತೆ ಬರೆದುಕೊಂಡಿದ್ದಾರೆ.
 
ಮೂಲಗಳ ಪ್ರಕಾರ ರಾಧಿಕಾ ಪಂಡಿತ್ ಈಗ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. 

ಯಶ್ ಅವರ ಈ ಪೋಸ್ಟ್ ಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. 
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp