ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ನಟಿ ಆರ್ತಿ ಚಾಬ್ರಿಯಾ

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಸಂತ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ ಆರ್ತಿ ಚಾಬ್ರಿಯಾ ಅವರು ಮಾರಿಷಸ್ ಮೂಲದ ವಿಶಾರದ್ ಬೀಡಾಸ್ಸಿ ಅವರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟಿ ಆರ್ತಿ ಚಾಬ್ರಿಯಾ ಮದುವೆ
ನಟಿ ಆರ್ತಿ ಚಾಬ್ರಿಯಾ ಮದುವೆ
ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಸಂತ ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟಿ ಆರ್ತಿ ಚಾಬ್ರಿಯಾ ಅವರು ಮಾರಿಷಸ್ ಮೂಲದ ವಿಶಾರದ್ ಬೀಡಾಸ್ಸಿ ಅವರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
36 ವರ್ಷದ ಆರ್ತಿ ಚಾಬ್ರಿಯಾ, ತಮ್ಮ ಪತಿಯೊಂದಿಗಿನ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಈಗಷ್ಟೇ ವಿವಾಹವಾಗಿದ್ದೇನೆ. ದಯಾಮಾಡಿ ನನ್ನನ್ನು ಆಶೀರ್ವದಿಸಿ ಎಂದು ಕೆಂಪು ಬಣ್ಣದ ಲೆಹೆಂಗ ತೊಟ್ಟು ಮಿಂಚುತ್ತಿರುವ ಆರ್ತಿ, ಗೋಲ್ಡನ್ ಮತ್ತು ಮರೂನ್ ಬಣ್ಣದ ಶೇರ್ವಾನಿ ಧರಿಸಿರುವ ಪತಿಯೊಂದಿಗಿನ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ.
2001ರಲ್ಲಿ ಲಜ್ಜಾ ಎಂಬ ಹಿಂದಿ ಸಿನಿಮಾದ ಮೂಲಕ ಬಾಲಿವುಡ್ ನಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸಿದ್ದ ಆರ್ತಿ 2005ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸೋದರ ಬಾಲಾಜಿ ಅಭಿನಯದ ಅಹಂ ಪ್ರೇಮಾಸ್ಮಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು.
 ಬಳಿಕ ಶಿವರಾಜ್ ಕುಮಾರ್ ಅಭಿನಯದ ಸಂತ ಸಿನಿಮಾದಲ್ಲಿ ಕಾಣಿಸಿಕೊಂಡು,ಹಾರ್ಟ್ ಅನ್ನೋ ಅಡ್ಡಾದಲ್ಲಿ ಲವ್ ಅನ್ನೋ ಲಾಂಗು ಹಿಡಿದು ಎಂಬ ಹಾಡಿನಲ್ಲಿ ಸಖತ್ ಸ್ಟೆಪ್ ಹಾಕಿದ್ದರು. ಉಪೇಂದ್ರ ಅವರ ರಜನಿಯಲ್ಲೂ ತೆರೆ ಹಂಚಿಕೊಂಡಿದ್ದ ಆರ್ತಿ, ನಂತರದ ದಿನಗಳಲ್ಲಿ ಮತ್ತೆ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com