'ನಂದನವನದೊಳ್ 'ಎಂಬ ಕೊಡಗು ಮೂಲದ ಸಸ್ಪ್ರೆನ್ಸ್ ಸ್ಟೋರಿ

ಕಾದಂಬರಿ ಆಧಾರಿತ ಸಂದೀಪ್ ಶೆಟ್ಟಿ ವಿಟ್ಟಲ್ ನಿರ್ದೇಶನದ ನಂದನವನದೊಳ್ ಚಿತ್ರವು ಅದ್ಭುತವಾದ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವಾಗಿದೆ
ನಂದನವನದೊಳ್ ಚಿತ್ರದ ದೃಶ್ಯ
ನಂದನವನದೊಳ್ ಚಿತ್ರದ ದೃಶ್ಯ
ಕಾದಂಬರಿ ಆಧಾರಿತ ಸಂದೀಪ್ ಶೆಟ್ಟಿ ವಿಟ್ಟಲ್ ನಿರ್ದೇಶನದ ನಂದನವನದೊಳ್ ಚಿತ್ರವು ಅದ್ಭುತವಾದ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವಾಗಿದೆ.ಕುತೂಹಲಕಾರಿ ಸಂಗತಿಯೆಂದರೆ, ಈ ಚಿತ್ರವನ್ನು ಕೊಡಗು ಮತ್ತು ಬೆಂಗಳೂರಿನಲ್ಲಿಚಿತ್ರೀಕರಿಸಲಾಗಿದ್ದು ಮುಖ್ಯವಾಗಿ ಕೊಡಗು ಜಿಲ್ಲೆ ಜನರನ್ನು ಒಳಗೊಂಡಿರುವ ಪಾತ್ರವನ್ನು ಆಯ್ಕೆ ಮಾಡಿದ್ದಾರೆ.
"ಈ ಚಿತ್ರವು ಕೊಡಗು ಸಂಸ್ಕೃತಿ ಮತ್ತು ಕ್ರೀಡೆಗಳ ಮೇಲೆ ಆಧಾರಿತವಾಗಿದೆ.ಜತೆಗೆ ಹಾಸ್ಯ, ಮತ್ತು ಸಸ್ಪೆನ್ಸ್‌ ಕಥಾನಕವನ್ನು ಹೊಂದಿದೆ"ನಿರ್ದೇಶಕರು ಹೇಳುತ್ತಾರೆ. ಈ ಕಥಾನಕದಲ್ಲಿ ಬುದ್ದಿವಂತ, ವೃತ್ತಿಪರ ಕೊಲೆಗಾರನೊಬ್ಬನನ್ನು ಪತ್ತೆ ಮಾಡಲು ಕಾದಂಬರಿಯೊಂದು ತನಿಖಾಧಿಕಾರಿಗಳಿಗೆ ಸಹಾಯ ಮಾಡಲಿದೆ ಎಂದು ಅವರು ಚಿತ್ರದ ಕಥೆ ಬಗೆಗೆ ಸುಳಿವು ನೀಡಿದ್ದಾರೆ.
ಯಕ್ಷಸಿರಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಭರತ್ ರೌಯಿಸಂತೋಷ್ ಶೆಟ್ಟಿ, ಆನಂದ್ ಯದ್ವಾಸ್ಡ್, ವಚೀರಾ ವಿಟ್ಟಲ್ ನಾಣಯ್ಯ ಹಾಗೂ  ಕಂಪನಾ ನಟಿಸಿದ್ದಾರೆ. ಶರಣ್ ಪೂನಾಚ ಮತ್ತು ಉಮೇಶ್ ಹೆಬ್ರಿ ನಿರ್ಮಿಸಿದ ನಂದನವನದೊಳ್ಸೆನ್ಸಾರ್ ಮಂಡಳಿಯಿಂದ ಯು ಪ್ರಮಾಣಪತ್ರವನ್ನು ಪಡೆದಿದ್ದು, ಜುಲೈನಲ್ಲಿ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com