ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಮಗಳು ಜಾನಕಿ' ಸಂವಾದ

ಮಧ್ಯಮ ವರ್ಗದ ಸಂವೇದನೆಗಳನ್ನು ದೃಶರೂಪದಲ್ಲಿ ಕಟ್ಟಿಕೊಟ್ಟು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಿರುತೆರೆಯ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಇತ್ತೀಚಿನ ಜನಪ್ರಿಯ ಧಾರಾವಾಹಿ...
ಮಗಳು ಜಾನಕಿ ಸಂವಾದ
ಮಗಳು ಜಾನಕಿ ಸಂವಾದ

ಬೆಂಗಳೂರು: ಮಧ್ಯಮ ವರ್ಗದ ಸಂವೇದನೆಗಳನ್ನು ದೃಶರೂಪದಲ್ಲಿ ಕಟ್ಟಿಕೊಟ್ಟು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಿರುತೆರೆಯ ನಿರ್ದೇಶಕ  ಟಿ ಎನ್ ಸೀತಾರಾಮ್ ಅವರ ಇತ್ತೀಚಿನ ಜನಪ್ರಿಯ ಧಾರಾವಾಹಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಗಳು ಜಾನಕಿ, ಅತಿ ಹೆಚ್ಚು ಜನಪ್ರಿಯತೆ ಮತ್ತು ಕುತೂಹಲವನ್ನು ಉಳಿಸಿಕೊಳ್ಳುವ ಮೂಲಕ ಮಗಳು ಜಾನಕಿ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಗಳು ಜಾನಕಿ  ಧಾರಾವಾಹಿ ತಂಡದ ಜೊತೆಗೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಸಂವಾದಗಳನ್ನು ಏರ್ಪಡಿಸಲಾಗಿತ್ತು. ತಂಡದ ಜನಪ್ರಿಯ ಕಲಾವಿದರು ತಂತ್ರಜ್ಞರ ಜೊತೆಗೆ ಪ್ರೇಕ್ಷಕರ ಪ್ರಶ್ನೋತ್ತರ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಿತು.

ಜೊತೆಗೆ ಸೀತಾರಾಮ್ ಅವರು ತಮ್ಮ ಧಾರಾವಾಹಿಗಳ ಮೂಲಕ ಪರಿಚಯಿಸಿದ ಜನಪ್ರಿಯ ನಟಿಯರ ಜೊತೆಗೆ ಒಂದು ವಿಶೇಷ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.

ಮರಳಿ ಬಾ ಮನ್ವಂತರವೇ ಹೆಸರಿನ ಈ ವಿಶೇಷ ಗೋಷ್ಠಿಯಲ್ಲಿ ಸೀತಾ ಕೋಟೆ, ಮಾಳವಿಕಾ ಅವಿನಾಶ್, ಮೇಘಾ ನಾಡಿಗೇರ್, ಎಂ ಡಿ ಪಲ್ಲವಿ, ವೀಣಾ ಸುಂದರ್, ಜಯಶ್ರೀ ರಾಜ್, ಸುಷ್ಮಾ ಭಾರದ್ವಾಜ್, ಅಶ್ವಿನಿ ಗೌಡ ಮತ್ತು ನಂದಿನಿ ಗೌಡ ಪಾಲ್ಗೊಂಡು ಸೀತಾರಾಮ್ ಅವರ ಜೊತೆಗಿನ ಕಿರುತೆರೆ ಅನುಭವಗಳನ್ನು ಹಂಚಿಕೊಂಡರು. ಅಲ್ಲದೆ ಸೀತಾರಾಮ್ ಅವರ ಧಾರಾವಾಹಿಗಳ ಶೀರ್ಷಿಕೆ ಗೀತೆಗಳ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿರುವ ಹಿರಿಯ ಕವಿ ಎಚ್ ಎಸ್ ವೆಂಕಟೇಶ ಮೂರ್ತಿ, ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶ ಎ.ಜೆ. ಸದಾಶಿವ, ರಂಗಕರ್ಮಿ ಶ್ರೀನಿವಾಸ್‌ ಜಿ ಕಪ್ಪಣ್ಣ ಮತ್ತು ಸಂಗೀತ ಸಂಯೋಜಕ ಪ್ರವೀಣ್  ರಾವ್ ಅವರೂ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮವು  ಕಲರ್ಸ್ ಸೂಪರ್ ವಾಹಿನಿಯಲ್ಲಿ ಮಾರ್ಚ್೨ (ಶನಿವಾರ) ಮತ್ತು ೩ (ಭಾನುವಾರ) ದಂದು ರಾತ್ರಿ ೯ ಗಂಟೆಗೆ ಪ್ರಸಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com