ಪಿ ಸಿ ಶೇಖರ್ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ರಚಿತಾ ರಾಮ್ ನಾಯಕಿ?

ಪಿ ಸಿ ಶೇಖರ್ ಮತ್ತು ಪ್ರಜ್ವಲ್ ದೇವರಾಜ್ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಸಿದ್ದವಾಗುತ್ತಿದೆ. ಅರ್ಜುನ ಚಿತ್ರದ...
ರಚಿತಾ ರಾಮ್
ರಚಿತಾ ರಾಮ್
ಪಿ ಸಿ ಶೇಖರ್ ಮತ್ತು ಪ್ರಜ್ವಲ್ ದೇವರಾಜ್ ಕಾಂಬಿನೇಷನ್ ನಲ್ಲಿ ಚಿತ್ರವೊಂದು ಸಿದ್ದವಾಗುತ್ತಿದೆ. ಅರ್ಜುನ ಚಿತ್ರದ ನಂತರ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ನಾಯಕಿ ಪಾತ್ರಕ್ಕೆ ರಚಿತಾ ರಾಮ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ.
ನಿರ್ದೇಶಕರು ಮತ್ತು ನಾಯಕಿ ಮಧ್ಯೆ ಒಂದು ಸುತ್ತಿನ ಮಾತುಕತೆ ನಡೆದಿದ್ದು ಇದೊಂದು ಲವ್ ಸ್ಟೋರಿಯಾಗಿರುವುದರಿಂದ ರಚಿತಾ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ ಎಂಬ ಲೆಕ್ಕಾಚಾರ ನಿರ್ದೇಶಕರದ್ದು.
ಏಪ್ರಿಲ್ ನಿಂದ ಚಿತ್ರದ ಕೆಲಸ ಆರಂಭವಾಗಲಿದ್ದು ರಚಿತಾ ಒಪ್ಪಿಕೊಂಡರೆ ಇದೇ ಮೊದಲ ಬಾರಿಗೆ ಅವರು ಮತ್ತು ಪ್ರಜ್ವಲ್ ಜೊತೆಯಾಗುತ್ತಿದ್ದಾರೆ.
ಪ್ರಜ್ವಲ್ ದೇವರಾಜ್ ಇನ್ಸ್ ಪೆಕ್ಟರ್ ವಿಕ್ರಮ್, ಜಂಟ್ಲ್ ಮ್ಯಾನ್, ಅರ್ಜುನ್ ಗೌಡ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ ಇತ್ತ ರಚಿತಾ ಶಿವರಾಜ್ ಕುಮಾರ್ ಜೊತೆಗೆ ಪಿ ವಾಸು ನಿರ್ದೇಶನದ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com