ಕನ್ನಡಕ್ಕೆ ಬಂದ ವಿಜಯ್ ದೇವರಕೊಂಡ: ಮತ್ತೆ ಒಂದಾಯ್ತು ’ಗೀತಾ ಗೋವಿಂದಂ’ ಜೋಡಿ

‘ಗೀತಾ ಗೋವಿಂದಂ’ ಚಿತ್ರದ ಮೂಲಕ ಮೋಡಿ ಮಾಡಿದ್ದ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಇದೀಗ ಕನ್ನಡ ಚಿತ್ರರಸಿಕರ ಮನಗೆಲ್ಲಲು ಸಿದ್ದವಾಗಿದೆ. ವಿಜಯ್.....

Published: 08th March 2019 12:00 PM  |   Last Updated: 08th March 2019 03:49 AM   |  A+A-


Vijay Deverakonda and   Rashmika Mandanna

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ

Posted By : RHN RHN
Source : Online Desk
ಹೈದರಾಬಾದ್: ‘ಗೀತಾ ಗೋವಿಂದಂ’  ಚಿತ್ರದ ಮೂಲಕ ಮೋಡಿ ಮಾಡಿದ್ದ  ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಇದೀಗ  ಕನ್ನಡ ಚಿತ್ರರಸಿಕರ ಮನಗೆಲ್ಲಲು ಸಿದ್ದವಾಗಿದೆ. ವಿಜಯ್ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೇಡ್’’ ಚಿತ್ರ ಕನ್ನಡದಲ್ಲಿ ಸಹ ತೆರೆಕಾಣಲಿದೆ. ಈ ಮೂಲಕ ವಿಜಯ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ವಿಭಿನ್ನ ಕಥಾಹಂದರದ ಈ ಚಿತ್ರವು ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ  ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ. ಮೇ 22ರಂದುತೆರೆ ಕಾಣಲಿರುವ ಈ ಚಿತ್ರದ ಟೀಸರ್ ಸಹ ನಾಲ್ಕು ಭಾಷೆಗಳಲ್ಲಿ ಬರಲಿದೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್, ಬಿಗ್ ಬೆನ್ ಸಿನಿಮಾಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದು ವಿಜಯ್ ವೈದ್ಯಕೀಯ ವಿದ್ಯಾರ್ಥಿಯಾಗಿಯೂ ರಶ್ಮಿಕಾ ಕ್ರಿಕೆಟರ್  ಆಗಿಯೂ ತೆರೆ ಮೇಲೆ ಕಾಣಿಸಲಿದ್ದಾರೆ.

ಚಿತ್ರದ ಪೋಸ್ಟರ್ ಇದಾಗಲೇ ಬಿಡುಗಡೆಯಾಗಿದ್ದು ಇದೊಂದು ಪಕ್ಕಾ ಪ್ರೇಮಕಥಾನಕವಾಗಿದೆ ಎಂದು ಹೇಳಲಾಗಿದೆ.

‘ಗೀತಾ ಗೋವಿಂದಂ’ ಮೂಲಕ ಖ್ಯಾತಿಗಳಿಸಿರುವ ವಿಜಯ್-ರಶ್ಮಿಕಾ ಜೋಡಿ ‘ಡಿಯರ್ ಕಾಮ್ರೇಡ್’ ನಲ್ಲಿಯೂ ಅಷ್ಟೇ ಯಶಸ್ವಿಯಾಗಲಿದೆಯೆ ಎನ್ನುವುದನ್ನು ಕಾದು ನೋಡಬೇಕಿದೆ.
Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp