ಸದ್ದಿಲ್ಲದೇ ಸೆಟ್ಟೇರಿತು ಕೆಜಿಎಫ್ ಚಾಪ್ಟರ್-2, ನಗರದಲ್ಲಿ ಇಂದು ನೆರವೇರಿದ ಚಿತ್ರದ ಮುಹೂರ್ತ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಕ್ಸಸ್ ಬಳಿಕ ಚಿತ್ರಪ್ರೇಮಿಗಳು ಚಾಪ್ಟರ್ 2 ಗಾಗಿ ತುದಿಗಾಲಲ್ಲಿ ಕಾಯುತ್ತಿರುವಂತೆಯೇ ಇತ್ತ ಕೆಜಿಎಫ್ ತಂಡ ಸದ್ದಿಲ್ಲದೇ ಕೆಜಿಎಫ್ ಚಾಪ್ಟರ್-2 ಚಿತ್ರದ ಮುಹೂರ್ತ ಕಾರ್ಯ ನೆರವೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಕ್ಸಸ್ ಬಳಿಕ ಚಿತ್ರಪ್ರೇಮಿಗಳು ಚಾಪ್ಟರ್ 2 ಗಾಗಿ ತುದಿಗಾಲಲ್ಲಿ ಕಾಯುತ್ತಿರುವಂತೆಯೇ ಇತ್ತ ಕೆಜಿಎಫ್ ತಂಡ ಸದ್ದಿಲ್ಲದೇ ಕೆಜಿಎಫ್ ಚಾಪ್ಟರ್-2 ಚಿತ್ರದ ಮುಹೂರ್ತ ಕಾರ್ಯ ನೆರವೇರಿದೆ.
'ಕೆ.ಜಿ.ಎಫ್​. ಚಾಪ್ಟರ್​ 2' ಸಿನಿಮಾದ ಮುಹೂರ್ತ ಸದ್ದಿಲ್ಲದೆ ಈಗಾಗಲೇ ಬೆಂಗಳೂರಿನಲ್ಲೇ ನೆರವೇರಿದೆ. ಸಿನಿಮಾ ಮುಹೂರ್ತ ಆಗಿರುವ ಬಗ್ಗೆ ನಟ ಯಶ್​ ಖುದ್ದಾಗಿ ಟ್ವೀಟ್​ ಮಾಡಿದ್ದಾರೆ.  ಇಂದು ಬೆಳಿಗ್ಗೆ ಕಂಠೀವ ಸ್ಟುಡಿಯೋದಲ್ಲಿ ಸರಳವಾಗಿ ಪೂಜೆ ನೆರವೇರಿಸುವ ಮೂಲಕ ಸಿನಿಮಾಗೆ ಚಾಲನೆ ನೀಡಲಾಗಿದೆ. ನಿರ್ಮಾಪಕ ವಿಜಯ್​ ಕಿರಗಂದೂರು ಹಾಗೂ ಮಂಜಣ್ಣ ಕ್ಲಾಪ್​ ಮಾಡಿದರೆ, ಪ್ರಶಾಂತ್​ ನೀಲ್ ಅವರ ತಾಯಿ ಭಾರತಿ ಸುಭಾಷ್​ ಅವರು ಕ್ಯಾಮೆರಾಗೆ ಚಾಲನೆ ನೀಡಿದ್ದಾರೆ. ಮುಹೂರ್ತದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್, ನಟಿ ಶ್ರೀನಿಧಿ ಶೆಟ್ಟಿ, ಭುವನ್​ ಗೌಡ ಹಾಗೂ ಚಿತ್ರತಂಡದವರು ಭಾಗವಹಿಸಿದ್ದರು.
ಈ ಸಿನಿಮಾ ಚಿತ್ರೀಕರಣಕ್ಕೂ ಮುನ್ನವೇ ಹೊಸ ತಾರೆಯರ ಎಂಟ್ರಿ ಕುರಿತಾಗಿ ಸಾಕಷ್ಟು ಸುದ್ದಿ ಮಾಡಿತ್ತು. ರಮಿಕಾ ಸೇನ್​ ಪಾತ್ರಕ್ಕೆ ಬಾಲಿವುಡ್​ ನಟಿ ರವೀನಾ ಟಂಡನ್​ ಹಾಗೂ ಡಾನ್​ ಪಾತ್ರವೊಂದಕ್ಕೆ ಸಂಜಯ್​ ದತ್ ಅವರನ್ನು ಕರೆತರಲು ಈಗಾಗಲೇ ಮಾತುಕತೆ ನಡೆಸಲಾಗಿದೆ. ಇಷ್ಟೇ ಅಲ್ಲದೆ ಈ ಸಿನಿಮಾ ಕುರಿತಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕೂತಹಲಕಾರಿ ಮಾಹಿತಿಗಳು ಹೊರ ಬೀಳಲಿದೆ.
ಕಳೆದ ಡಿಸೆಂಬರ್​ 21ರಂದು ಐದು ಭಾಷೆಗಳಲ್ಲಿ ತೆರೆಕಂಡಿದ್ದ  'ಕೆ.ಜಿ.ಎಫ್​ ಚಾಪ್ಟರ್​ 1' ಗಳಿಕೆಯಲ್ಲಿ ಕನ್ನಡದಲ್ಲೇ ನೂರು ಕೋಟಿಯ ಗಡಿ ದಾಟಿ ಹೊಸ ದಾಖಲೆ ಬರೆದಿತ್ತು. ಇನ್ನು ಉಳಿದ ಭಾಷೆಗಳಲ್ಲೂ ಈ ಸಿನಿಮಾ ಸಖತ್​ ಸದ್ದು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com